ನಾಳೆಯಿಂದ ನೀರು ಪೂರೈಕೆಯಲ್ಲಿ ಬದಲಾವಣೆ
Update: 2017-03-25 23:54 IST
ಮಂಗಳೂರು, ಮಾ.25: ಕುಡಿಯುವ ನೀರಿಗೆ ಸಂಬಂಸಿ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಡಲಾದ ರೇಷನಿಂಗ್ ವ್ಯವಸ್ಥೆಯಿಂದ ಕೆಲ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಯಾಗದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪೂರೈಕೆ ಹಾಗೂ ಕಡಿತದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ನೀರು ಪೂರೈಕೆಗೆ ಸಂಬಂಸಿ ಶುಕ್ರವಾರ ಮನಪಾ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ನೀರು ಲಭ್ಯವಾಗಲಿದೆ. ಗುರುವಾರ ಹಾಗೂ ಶುಕ್ರವಾರ ನೀರು ಪೂರೈಕೆ ಕಡಿತಗೊಳ್ಳಲಿದೆ ಎಂದು ಮೇಯರ್ ತಿಳಿಸಿದ್ದಾರೆ. ಪ್ರಸ್ತುತ ನಗರದಲ್ಲಿ 48 ಗಂಟೆ ನೀರು ಪೂರೈಕೆ ಹಾಗೂ 36 ಗಂಟೆಗಳ ಕಡಿತದ ವ್ಯವಸ್ಥೆಯಲ್ಲಿ ನೀರು ಸರಬರಾಜಾಗುತ್ತಿದೆ.