×
Ad

ಶ್ರೀಲಂಕಾ ಕ್ರಿಕೆಟಿಗರ ಬಸ್ ಮೇಲೆ ದಾಳಿ ನಡೆಸಿದ ಉಗ್ರನ ಹತ್ಯೆ

Update: 2017-03-26 10:43 IST

ವಾಶಿಂಗ್ಟನ್‌, ಮಾ.26: ಇಸ್ಲಾಮಾಬಾದ್ ನಲ್ಲಿ 2008ರಲ್ಲಿ ಹೋಟೆಲ್ ಮೇಲೆ ಮತ್ತು 2009ರಲ್ಲಿ ಶ್ರೀಲಂಕಾದ ಕ್ರಿಕೆಟಿಗರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಯಾಗಿದ್ದ ಉಗ್ರ ಸಂಘಟನೆ ಅಲ್-ಖೈದಾ ನಾಯಕ ಖಾರಿ ಯಾಸಿನ್‌ ಎಂಬಾತನನ್ನು ಅಫ್ಘಾನಿಸ್ತಾನದಲ್ಲಿ ಮಾ.19ರಂದು ನಡೆಸಲಾದ  ವೈಮಾನಿಕ ದಾಳಿಯೊಂದರಲ್ಲಿ ಕೊಲ್ಲಲಾಗಿದೆ ಎಂದು ಪೆಂಟಗಾನ್‌ ಸ್ಪಷ್ಟಪಡಿಸಿದೆ.

ಯಾಸಿನ್‌ ಪಾಕಿಸ್ತಾನದ ಬಲೋಚಿಸ್ತಾನದ  ಅಲ್ ಖೈದಾ  ಭಯೋತ್ಪಾದಕ ಸಂಘಟನೆಯ ನಾಯಕ. ಟೆರ‍್ರಿಕ್‌ -ಎ-ತಾಲಿಬಾನ್‌ ಸಂಘಟನೆಯ ಸಹಾಯದೊಂದಿಗೆ  ಅಲ್ ಖೈದಾ ನೇತೃತ್ವದಲ್ಲಿ ಆನೇಕ ದಾಳಿ ಪ್ರಕರಣದಲ್ಲಿ ಈತ ಶಾಮೀಲಾಗಿದ್ದ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್‌ ಮ್ಯಾಟಿಸ್‌ ತಿಳಿಸಿದ್ದಾರೆ.

2008 , ಸೆ.20ರಂದು ಇಸ್ಲಾಮಾಬಾದ್ ನ ಹೋಟೆಲ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 12ಮಂದಿ ಮೃತಪಟ್ಟಿದ್ದರು. ಲಾಹೋರ‍್ ನಲ್ಲಿ 2009ರಲ್ಲಿ ಶ್ರೀಲಂಕಾದ ಕ್ರಿಕೆಟಿಗರು ಪ್ರಯಣಿಸುತ್ತಿದ್ದ ಬಸ್‌ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ತಾನದ ಆರು ಪೊಲೀಸರು ಮತ್ತು ಇಬ್ಬರು ನಾಗರಿಕರು ಮೃತಪಟಿದ್ದರು. ಆರು ಮಂದಿ ಕ್ರಿಕೆಟಿಗರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News