ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ಚಾಲನೆ
ಬೆಂಗಳೂರು, ಮಾ.26: ಬಹು ನಿರೀಕ್ಷಿತ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಆರಂಭಗೊಂಡಿದ್ದು, .ಕೇಂದ್ರ ರೈಲ್ವೆ ಸಚಿವ ಸುರೇಶ್‍ಪ್ರಭು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಂದು ರೈಲು ಸಂಚಾರಕ್ಕೆ ಚಾಲನೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ , ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.
ಈ ನೂತನ ರೈಲು ನೆಲಮಂಗಲ, ಕುಣಿಗಲ್, ಯಡಿಯೂರು ಮತ್ತು ಶ್ರವಣಬೆಳಗೊಳದ ಮೂಲಕ ಹಾಸನಕ್ಕೆ ತಲುಪಲಿದೆ.
1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ತಮ್ಮ ಕನಸಿನ ಯೋಜನೆಗೆ ಅನುಮೋದನೆ ನೀಡಿ 295 ಕೋಟಿ ರೂ. ಅನುದಾನ ನೀಡಿದ್ದರು.ಅಂದಿನ ರೈಲ್ವೆ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರಯಾಣದ ಅವಧಿ ಬಸ್‍ಗಿಂತ ಕಡಿಮೆ ಇರಲಿದೆ. ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣದ ಅವಧಿ 3 ಗಂಟೆ 50 ನಿಮಿಷದಲ್ಲಿ ಮತ್ತು ಸೂಪರ್ ಫಾಸ್ಟ್ ರೈಲು 2 ಗಂಟೆ 40 ನಿಮಿಷಗಳಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ತಲುಪಲಿದೆ.