ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರಿಗೆ ಶ್ರದ್ಧಾಂಜಲಿ
Update: 2017-03-26 13:49 IST
ಮೂಡುಬಿದಿರೆ, ಮಾ.26: ಮೂಡುಬಿದಿರೆಯ ವಿವಿಧ ಯಕ್ಷಗಾನ ಸಂಘಟನೆಗಳು ಒಗ್ಗೂಡಿ ಶನಿವಾರ ಸಂಜೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಆ ಸಂದರ್ಭದಲ್ಲಿ ವಿದ್ವಾಂಸ ಡಾ.ಪ್ರಭಾಕರ ಜೋಶಿಯವರು ಗಂಗಯ್ಯ ಶೆಟ್ಟಿಯವರ ಕಲಾಜೀವನದ ಬಗ್ಗೆ ಮಾತನಾಡಿದರು.
ಯಕ್ಷಗಾನ ಪ್ರೋತ್ಸಾಹಕ ಕೆ.ಶ್ರೀಪತಿ ಭಟ್, ಯಕ್ಷಗಾನ ಸಂಘಟಕ, ಲೇಖಕ ಶಾಂತರಾಮ ಕುಡ್ವ, ಯಕ್ಷಮೇನಕಾದ ಸದಾಶಿವ ನೆಲ್ಲಿಮಾರ್, ಬೆಳುವಾಯಿಯ ಯಕ್ಷದೇವ ಮಿತ್ರ ಕಲಾ ಮಂಡಳಿಯ ಕಾರ್ಯಾಧ್ಯಕ್ಷ ದೇವಾನಂದ ಭಟ್ ಸಹಿತ ಯಕ್ಷಗಾನ ಕಲಾವಿದರು, ಸಂಘಟಕರು, ಅಭಿಮಾನಿಗಳು ಗಂಗಯ್ಯ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.