×
Ad

ಅತ್ಯುತ್ತಮ ಜೀವನ ಗುಣಮಟ್ಟ : ಮಂಗಳೂರಿಗೆ ದೇಶದಲ್ಲಿಯೇ ಅಗ್ರಸ್ಥಾನ

Update: 2017-03-26 17:30 IST

ಮಂಗಳೂರು,ಮಾ.26: ದೇಶದಲ್ಲೇ ಗುಣಮಟ್ಟದ ಜೀವನಕ್ಕೆ ಅತ್ಯಂತ ಪ್ರಶಸ್ತ ತಾಣ ಯಾವುದು ಗೊತ್ತೇ? ನಮ್ಮ ಹೆಮ್ಮೆಯ ಮಂಗಳೂರು. ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಶಸ್ತ ತಾಣಗಳ ಪಟ್ಟಿಯಲ್ಲಿ ಮಂಗಳೂರು 41ನೆ ಸ್ಥಾನದಲ್ಲಿದೆ. ಜಾಗತಿಕ ಆರೋಗ್ಯ ಸೇವೆಗಳ ಪಟ್ಟಿಯಲ್ಲೂ ಮಂಗಳೂರಿಗೆ 12ನೆ ಸ್ಥಾನ ಲಭಿಸಿದ್ದು, ನಗರದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.

ಬಳಕೆದಾರರ ಸೃಷ್ಟಿಯ ಜಾಗತಿಕ ಡಾಟಾಬೇಸ್ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ 2017ನೆ ಸಾಲಿನ ರ್ಯಾಂಕಿಂಗ್ ಪ್ರಕಟಿಸಿದ್ದು, ಆರೋಗ್ಯ ಕಾಳಜಿಯಲ್ಲಿ ಮಂಗಳೂರು, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಜಪಾನ್‌ನ ನಗರಗಳನ್ನು ಹಿಂದಿಕ್ಕಿ 12ನೆ ಸ್ಥಾನಕ್ಕೇರಿದೆ. ನಗರದ ಖ್ಯಾತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು ಈ ಹೆಗ್ಗಳಿಕೆಗೆ ಕಾರಣವಾಗಿವೆ.

ಗುಣಮಟ್ಟದ ಜೀವನಕ್ಕೆ ಪ್ರಶಸ್ತವಾದ ತಾಣಗಳ ಪಟ್ಟಿಯಲ್ಲಿ ವಿಶ್ವದಲ್ಲಿ 41ನೆ ಸ್ಥಾನದಲ್ಲಿರುವ ಮಂಗಳೂರು, ಸ್ಯಾನ್‌ಫ್ರಾನ್ಸಿಸ್ಕೊ ನಗರವನ್ನು ಹಿಂದಿಕ್ಕಿದೆ. ಆಸ್ಟ್ರೇಲಿಯಾದ ಕ್ಯಾನ್ ಬೆರ್ರಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆನಿಜುವೆಲಾ 143ನೆ ಹಾಗೂ ಕೊನೆ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಟರ್ಕಿಯ ಬುರ್ಸಾ ನಗರವನ್ನು ಹೊರತುಪಡಿಸಿದರೆ, ಮಂಗಳೂರು ಎರಡನೆ ಸ್ಥಾನದಲ್ಲಿದೆ. ಏಷ್ಯಾಮಟ್ಟದಲ್ಲಿ ದುಬೈ 9ನೆ ಸ್ಥಾನದಲ್ಲಿದ್ದರೆ ಅಬುಧಾಬಿ 5ನೆ ಅತ್ಯುತ್ತಮ ನಗರ ಎನಿಸಿಕೊಂಡಿದೆ.

ಭಾರತೀಯ ನಗರಗಳ ಪೈಕಿ ಪುಣೆ (77), ಹೈದರಾಬಾದ್ (96), ಬೆಂಗಳೂರು (108), ಗುರ್ಗಾಂವ್ (112), ಚೆನ್ನೈ (128), ದಿಲ್ಲಿ (130), ಕೋಲ್ಕತ್ತಾ (138) ಹಾಗೂ ಮುಂಬೈ (139) ಸ್ಥಾನ ಪಡೆದಿವೆ. ಒಟ್ಟಾರೆಯಾಗಿ ದೇಶಗಳ ಪಟ್ಟಿಯಲ್ಲಿ ಭಾರತ 51ನೆ ಸ್ಥಾನದಲ್ಲಿದೆ.

ಮಾಹಿತಿ :https://www.numbeo.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News