×
Ad

ಗದ್ದೆಗೆ ​ಕಾರು ಉರುಳಿ ಚಾಲಕ ಗಂಭೀರ

Update: 2017-03-26 17:34 IST

ಮುಲ್ಕಿ, ಮಾ.26: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಕಿರುಸೇತುವೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿ ಬಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ರವಿವಾರ ನಸುಕಿನ ಜಾವ ನಡೆದಿದೆ.

 ಗಾಯಗೊಂಡವರನ್ನು ಪಡುಬಿದ್ರೆ ನಡ್ಸಾಲ್ ನಿವಾಸಿ ಆಯುಷ್ ಶೆಟ್ಟಿ(21) ಎಂದು ಗುರುತಿಸಲಾಗಿದೆ. ಗಾಯಾಳು ಆಯುಷ್ ಪಡುಬಿದ್ರೆಯಿಂದ ಮಂಗಳೂರಿಗೆ ತಮ್ಮ ಎರೆಟಿಗಾ ಕಾರಿನಲ್ಲಿ ಬೆಳಗ್ಗಿನ ಜಾವ 4:30ರ ಸಂಚರಿಸುತ್ತಿದ್ದ ವೇಳೆ ಪಡುಪಣಂಬೂರು ಕಿರುಸೇತುವೆ ಬಳಿ ಕಾರು ನಿಯಂತ್ರಣ ತಪ್ಪಿ ಹೆದ್ದಾರಿಯ ಕಬ್ಬಿಣದ ತಡೆಬೇಲಿಗೆ ಢಿಕ್ಕಿ ಹೊಡೆದು ಗದ್ದೆ ಬದಿಗೆ ಹೋಗಿ ಬಿದ್ದಿದೆ.

 ಅಪಘಾತದ ರಭಸಕ್ಕೆ ಕಾರು ಸಂಪುರ್ಣ ನಜ್ಜುಗುಜ್ಜ್ಜಾಗಿದ್ದು, ಆಯುಷ್ ಗಾಯಗೊಂಡು ಕಾರಿನೊಳಗೆ ಸಿಲುಕಿ ಹಾಕಿಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭ ಸ್ಥಳಿಯರು ಅವರನ್ನು ಕಾರಿನಿಂದ ಮೇಲೆತ್ತಿ ಸಮೀದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News