ರಜಬ್ ಸಂದೇಶ ಉದ್ಘಾಟನಾ ಸಮಾರಂಭ
ಉಳ್ಳಾಲ, ಮಾ.26: ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಹಾಗು ಎಸ್ ವೈ ಎಸ್ ನಾಯಕರಿಗೆ ಅಭಿನಂದನಾ ಸಮಾರಂಭ ಶಾಖಾಧ್ಯಕ್ಷ ಸಿರಾಜುದ್ದೀನ್ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಸ್ಟೂಡೆಂಟ್ಸ್ ಹೌಸ್ ನಲ್ಲಿ ಜರುಗಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಕ್ಕರೆಕೆರೆ ಶಾಖೆಯು ರಜಬ್ ಸಂದೇಶ ಕಾರ್ಯಕ್ರಮವನ್ನು ಉಳ್ಳಾಲ ಸೆಕ್ಟರಿನ ಉಳಿದ ಶಾಖೆಗಳಿಗಿಂತ ಮುಂಚೆ ಹಮ್ಮಿಕೊಂಡು ಉಳಿದ ಶಾಖೆಗಳಿಗೆ ಮಾದರಿಯಾಗಿದೆ ಎಂದರು.
ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ರಜಬ್ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಎಸ್ಸೆಸ್ಸೆಫ್ ಸಂಘಟನೆಯಲ್ಲಿರಬೇಕಾದ ಕಾಲಾವಧಿ ಮುಗಿದು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯಿಂದ ಎಸ್ ವೈ ಎಸ್ ಗೆ ಪಾದಾರ್ಪಣೆಗೈದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಬಶೀರ್ ಸಖಾಫಿ ಉಳ್ಳಾಲ, ಎಸ್ ಎಂ ಶರೀಫ್ ಅಕ್ಕರೆಕೆರೆ, ಖಾಲಿದ್ ಪಟೇಲ್ ಕಂಪೌಂಡ್, ಅಶ್ರಫ್ ಅಕ್ಕರೆಕೆರೆ ಗುಡ್ಡೆ ಇವರಿಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಒಂಭತ್ತುಕೆರೆ ಇವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸಿದ್ದೀಕ್ ಅಕ್ಕರೆಕೆರೆ, ಆಸಿಂ ಅಕ್ಕರೆಕೆರೆ ಗುಡ್ಡೆ ಹಾಗು ಯೂನುಸಾಕ ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ವಂದಿಸಿದರು.