×
Ad

ಎಂಆರ್‌ಪಿಎಲ್ ಸಹಭಾಗಿತ್ವದೊಂದಿಗೆ ಅಮಲಭಾರತ ಸ್ವಚ್ಛತಾ ಅಭಿಯಾನ

Update: 2017-03-26 18:46 IST

ಮಂಗಳೂರು, ಮಾ.26: ನಗರದ ಬೋಳೂರು ಅಮೃತಾನಂದಮಯಿ ಮಠದ ವತಿಯಿಂದ ನಡೆಯುತ್ತಿರುವ 'ಅಮಲ ಭಾರತ' ಸ್ವಚ್ಛತಾ ಕಾರ್ಯಕ್ರಮಕ್ಕೆ ಈಗ ಎಂಆರ್‌ಪಿಎಲ್ ಸಂಸ್ಥೆ ಕೈ ಜೋಡಿಸಿದೆ. ಅದರಂತೆ ಎಂರ್‌ಪಿಎಲ್ ಸಹಭಾಗಿತ್ವದೊಂದಿಗೆ ರವಿವಾರ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಆರ್ಯ ಸಮಾಜ ರಸ್ತೆ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಬೋಳೂರು ಅಮೃತಾನಂದಮಯಿ ಮಠದ ಮಠಾಧಿಪತಿ ಮಂಗಳಾಮೃತ ಚೈತನ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 2011ರಿಂದ ಅಮಲ ಭಾರತ ಸ್ವಚ್ಛತಾ ಅಭಿಯಾನ ನಡೆದಿದೆ. ಜನತೆಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದೆ. ಮೊದಲು ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ ಉತ್ತಮ ಕಾರ್ಯಕ್ರಮಗಳನ್ನು ಮಾಡಲು ಅದು ಪ್ರೇರೇಪಣೆ ನೀಡುತ್ತದೆ ಎಂದರು.

ಅಮಲ ಭಾರತ ಸ್ವಚ್ಛತಾ ಅಭಿಯಾನದ ಅಧ್ಯಕ್ಷ ಡಾ.ಜೀವರಾಜ್ ಸೊರಕೆ ಮಾತನಾಡಿ, ಮಾತಾ ಅಮೃತಾನಂದಮಯಿಯ ಅಪೇಕ್ಷೇಯಂತೆ ಮಠದ ಭಕ್ತರು ಎಲ್ಲೆಡೆ ಸ್ವಚ್ಛತಾ ಆಂದೋಲನವನ್ನು ನಡೆಸುತ್ತಾ ಬಂದಿದ್ದಾರೆ. ಇದುವರೆಗೆ 75 ಕಾರ್ಯಕ್ರಮಗಳಾಗಿವೆ ಎಂದರು.

ಅಮಲ ಭಾರತ ಅಭಿಯಾನದ ಮುಖ್ಯ ಸಂಘಟಕ ಮಾಧವ ಸುವರ್ಣ, ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಪಾಧ್ಯಕ್ಷ ಡಾ.ದೇವದಾಸ್, ಕಾರ್ಯದರ್ಶಿ ಡಾ.ಅಶೋಕ್ ಶೆಣೈ, ಸಂಘಟಕ ಶ್ರೀನಿವಾಸ ಶೆಟ್ಟಿಗಾರ್, ರೋಟರಿ ಮಾಜಿ ಗವರ್ನರ್ ಸೂರ್ಯ ಪ್ರಕಾಶ್, ಶ್ರದ್ಧಾನಂದ ಸೇವಾಶ್ರಮದ ವಾರ್ಡನ್ ಲಲಿತಾ, ಪ್ರಮುಖರಾದ ರವೀಂದ್ರನಾಥ್ ಕೆ., ಪ್ರಕಾಶ್ ಟಕ್ಕರ್, ವಿಠಲ್ ಕುಡ್ವಘಿ, ರಮೇಶ್ ಹೆಗ್ಡೆ, ಪ್ರೇಮರಾಜ್, ಗುಣವತಿ, ಪುಷ್ಪಾವತಿ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News