×
Ad

ರಸ್ತೆ ಬದಿ ನಿಂತ ಬಸ್ಸಿಗೆ ಬೈಕ್ ಢಿಕ್ಕಿ: ಯುವಕ ಗಂಭೀರ

Update: 2017-03-26 19:07 IST

ಭಟ್ಕಳ, ಮಾ.26: ರಸ್ತೆ ಬದಿ ಪಾರ್ಕ್ ಮಾಡಿದ ಖಾಸಗಿ ಬಸ್ಸಿಗೆ ಓವರ್‌ಟೇಕ್ ಭರದಲ್ಲಿ ವೇಗವಾಗಿ ಚಲಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲನೆ ಮಾಡುತ್ತಿದ್ದ ಯುವಕ ರಸ್ತೆ ಬದಿಗೆ ಉರುಳಿ ಬಿದ್ದು ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಜೆ ಇಲ್ಲಿನ ಶಮ್ಸುದ್ದೀನ್ ವೃತ್ತದ ಬಳಿಯ ಪೆಟ್ರೋಲ್ ಪಂಪ್ ಎದುರು ನಡೆದಿದೆ.

ಗಂಭೀರವಾಗಿ ಗಾಯಗೊಂಡ ಯುವಕನ್ನು ಮುಖ್ಯ ರಸ್ತೆಯ ನಿವಾಸಿ ಅಬ್ದುಲ್ ವಾಸಿ ಹಾಫಿಜ್ಕಾ(18) ಎಂದು ಗುರುತಿಸಲಾಗಿದೆ.

ಈತ ಮುಖ್ಯ ರಸ್ತೆಯಿಂದ ನವಾಯತ್ ಕಾಲೋನಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಓವರ್ ಟೇಕ್ ಮಾಡಲು ಹೋಗಿ ಪೆಟ್ರೋಲ್ ಪಂಪ್ ಎದುರು ನಿಲ್ಲಿಸಿದ್ದ ಖಾಸಗಿ ಬಸ್ ಗೆ ಢಿಕ್ಕಿ ಹೊಡೆದ ಎಂದು ಹೇಳಲಾಗುತ್ತಿದ್ದು, ಗಾಯಗೊಂಡ ಯುವಕನನ್ನು ಸ್ಥಳಿಯರು ಕೂಡಲೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ. ತಲೆ ಹಾಗೂ ಕಾಲುಗಳಿಗೆ ಗಂಭಿರ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News