ಸ್ಟವ್ ಸ್ಪೋಟಗೊಂಡು ಮಹಿಳೆ ಮೃತ್ಯು
Update: 2017-03-26 22:06 IST
ಬೈಂದೂರು, ಮಾ.26: ಚಹಾ ಮಾಡುವ ವೇಳೆ ಸ್ಟವ್ ಸ್ಪೋಟಗೊಂಡು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಪ್ಪುಂದ ಗ್ರಾಮದ ಮೈಯರ್ಕೇರಿ ಎಂಬಲ್ಲಿ ನಡೆದಿದೆ.
ಮೃತರನ್ನು ಉಪ್ಪುಂದ ಗ್ರಾಮದ ಮಡಿಕಲ್ ನಿವಾಸಿ ದೇವಿ(35) ಎಂದು ಗುರುತಿಸಲಾಗಿದೆ. ಇವರು ಮಾ.24ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ಮನೆಯಲ್ಲಿ ಚಹಾ ಮಾಡಲೆಂದು ಸೀಮೆಎಣ್ಣೆ ಸ್ಟವ್ ಹಚ್ಚುವಾಗ ಸ್ಟವ್ ಸ್ಪೋಟಗೊಂಡಿತು. ಇದರಿಂದ ದೇವಿಯವರ ಮೈಗೆ ಬೆಂಕಿ ತಗುಲಿ ಗಂಭೀರ ವಾಗಿ ಗಾಯಗೊಂಡಿದ್ದರು.
ಮೊದಲು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ನಂತರ ಹಣಕಾಸಿನ ಅಭಾವ ದಿಂದ ಅವರನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸ ಲಾಯಿತು. ಆದರೆ ಮಾ.25ರಂದು ಮಧ್ಯಾಹ್ನ ವೇಳೆ ಅವರು ಚಿಕಿತ್ಸೆ ಫಲ ಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.