ಕಿಡಿಗೇಡಿಯಿಂದ ಕಾರಿಗೆ ಬೆಂಕಿ
Update: 2017-03-26 22:43 IST
ಕಾರ್ಕಳ, ಮಾ.26: ಮಾಳ ಗ್ರಾಮದ ಬರ್ವೆ ಎಂಬಲ್ಲಿ ಮಾ.25ರಂದು ಸಂಜೆ 4ಗಂಟೆ ಸುಮಾರಿಗೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ.
ನಲ್ಲೂರು ಗ್ರಾಮದ ಬಿರಾಲುಪೇಟೆಯ ಜಗದೀಶ ಶೆಟ್ಟಿ ಎಂಬವರು ನಿಲ್ಲಿಸಿ ಹೋಗಿದ್ದ ಕಾರಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಓಡಿ ಹೋಗಿದ್ದು, ಇದರಿಂದ ಕಾರು ಸಂಪೂರ್ಣ ಸುಟ್ಟು ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಓಡಿ ಹೋದ ವ್ಯಕ್ತಿಯು ಸತೀಶ್ ಬರ್ವೆ ಎಂದು ಜಗದೀಶ್ ಶೆಟ್ಟಿ ಅನು ಮಾನ ವ್ಯಕ್ತಪಡಿಸಿದ್ದು, ಬರ್ವೆ ಎಂಬಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದು ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿದ ದ್ವೇಷದಿಂದ ಈತ ಈ ಕೃತ್ಯ ಎಸಗಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖ ಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.