ಕೃಷ್ಣಾಪುರದಲ್ಲಿ ಸಲಫಿ ಸಮಾವೇಶ
Update: 2017-03-26 23:05 IST
ಮಂಗಳೂರು, ಮಾ.26: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಂ. ಚೊಕ್ಕಬೆಟ್ಟು ಘಟಕದ ವತಿಯಿಂದ ರವಿವಾರ ಸಂಜೆ ಗಂಟೆ 5 ರಿಂದ ರಾತ್ರಿ ಗಂಟೆ 9:30 ರವರೆಗೆ ಕೃಷ್ಣಾಪುರ ಜಂಕ್ಷನ್‌ನಲ್ಲಿ ಕುರ್‌ಆನ್ ಸಂದೇಶ ಸಮಾವೇಶವು ಜರಗಿತು.
ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲಾಹ್ ಮುಸ್ಲಿಯಾರ್ 'ಲಾಇಲಾಹ ಇಲ್ಲಲ್ಲಾಹ್' ಎಂಬ ವಿಷಯವಾಗಿ ದಿಕ್ಸೂಚಿ ಭಾಷಣ ಮಾಡಿದರು. ಮೌಲವಿಗಳಾದ ಅಲಿ ಉಮರ್ ಮತ್ತು ಅಬೂ ಬಿಲಾಲ್‌ರವರು ವಿವಿಧ ವಿಷಯಗಳಲ್ಲಿ ಮಾತನಾಡಿದರು.
ಸಲಫಿ ಮೂವ್‌ಮೆಂಟ್‌ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್ ಮತ್ತು ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಮುಖ್ಯ ಅತಿಥಿಗಳಾಗಿದ್ದರು. ಎಸ್.ಕೆ.ಎಸ್.ಎಂ.ನ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಫಯಾರ್ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ. ಹನೀಫ್ ಸ್ವಾಗತಿಸಿದರು. ಅಬ್ದುಲ್ ರಹೀಂ ವಂದಿಸಿದರು.