‘ವಿಕಲಚೇತನ ಸಾಧಕರ ಕೈಪಿಡಿ’ಗಾಗಿ ಸಾಧಕ ವಿಕಲಚೇತನರಿಂದ ಮಾಹಿತಿ ಆಹ್ವಾನ
Update: 2017-03-26 23:55 IST
ಉಡುಪಿ, ಮಾ.26: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಕಲಚೇತನ ವ್ಯಕ್ತಿಗಳ ಮಾಹಿತಿ ಕೈಪಿಡಿ ಸಿದ್ಧಪಡಿಸುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ, ಶಿಕ್ಷಣ,ಸಮಾಜಸೇವೆ ವೈದ್ಯಕೀಯಸೇವೆ, ಇತ್ಯಾದಿ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಗಣನೀಯ ಸೇವೆಗೈದಿರುವ/ಸೇವೆಗೈಯುತ್ತಿರುವ ವಿಕಲಚೇತನ ವ್ಯಕ್ತಿಗಳು ತಮ್ಮ ಸಾಧನೆಗಳ ಬಗ್ಗೆ ಮಾಹಿತಿಯನ್ನು 2 ಪ್ರತಿ ಭಾವಚಿತ್ರ, ವ್ಯಕ್ತಿಪರಿಚಯ ಹಾಗೂ ಸಾಧನೆಗಳ ದಾಖಲಾತಿಗಳೊಂದಿಗೆ ಎ.15ರೊಳಗೆ ಕೆಳಗಿನ ಕಚೇರಿಗೆ ಕಳುಹಿಸುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಕಾರಿಗಳ ಕಚೇರಿ, ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ, ‘ಸಿ’ಬ್ಲಾಕ್, ತಳ ಅಂತಸ್ತು, ರಜತಾದ್ರಿ, ಮಣಿಪಾಲ, ಉಡುಪಿ. (ದೂ.ಸಂ. 0820- 2574810/811) ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.