ಕಣ್ಣೂರಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Update: 2017-03-26 18:30 GMT

ಮಂಗಳೂರು, ಮಾ.26: ಕಣ್ಣೂರು ಬೀಡುವಿನಲ್ಲಿರುವ ತರ್ಬಿಯತುಲ್ ಅನಾಮ್ ಮದ್ರಸ ಬಳಿ ಬೃಹತ್ ಚರಂಡಿಯ ಕಾಂಕ್ರಿಟ್ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ರವಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸುಮಾರು 45 ಲಕ್ಷ ರೂ. ಅನುದಾನದ ನೆರನಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದ ವಿಶೇಷ ಯೋಜನೆಯಿಂದ 50 ಲಕ್ಷ ರೂ. ಮಂಜೂರಾಗಿದೆ. ಈ ನಿಧಿಯನ್ನು ಈ ಪ್ರದೇಶದಲ್ಲಿ ಆಗಬೇಕಾಗಿರುವ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ ಹಾಗೂ ಒಳ ಚರಂಡಿ ಯೋಜನೆಗೆ ಬಳಸಲಾಗುವುದು. ಅದಲ್ಲದೆ, ಶಾಸಕರ ಅನುದಾನದ ನಿಧಿಯಿಂದ ಹಾಗೂ ಎಸ್.ಎಫ್.ಸಿ. ನಿಧಿಯಿಂದಲೂ ಕೂಡಾ ಈ ಪ್ರದೇಶದ ಅಭಿವೃದ್ಧಿಗೆ ಬಳಸಲಾಗುವುದು ಎಂಬುದಾಗಿ ಶಾಸಕರು ತಿಳಿಸಿದರು.

ನಡುಪಳ್ಳಿ ಮಸೀದಿಗೆ ತಾಗಿಕೊಂಡಿರುವ ತಡೆಗೋಡೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 1 ಕೋ.ರೂ. ಈಗಾಗಲೇ ಮಂಜೂರಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಕೆಎಸ್‌ಟಿಡಿಸಿ ನಿರ್ದೇಶಕ ಹಮೀದ್ ಕಣ್ಣೂರು, ಕಣ್ಣೂರು ಮಸೀದಿಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ತರ್ಬಿಯತುಲ್ ಅನಾಮ್ ಮದ್ರಸದ ಅಧ್ಯಕ್ಷ ಹೈದರ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಕಣ್ಣೂರು, ಕಾಂಗ್ರೆಸ್ ಮುಖಂಡರಾದ ಉಮರಬ್ಬ, ಜಿನ್ನಪ್ಪ ಪೂಜಾರಿ, ಮುಹಮ್ಮದ್ ಶರೀಫ್, ಲತೀಫ್, ಡೆನ್ನಿಸ್ ಡಿಸಿಲ್ವ, ಅರುಣ್ ಕುವೆಲೊ, ಅಶ್ರಫ್ ಬೀಡು, ಜಿ.ಎಚ್.ಖಾದರ್, ಪಾಲಿಕೆಯ ಇಂಜಿನಿಯರ್ ಗಣಪತಿ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News