ಕಾಪು ತಾಲೂಕು ಘೋಷಣೆ: ಸಂಭ್ರಮ

Update: 2017-03-26 18:31 GMT

ಕಾಪು, ಮಾ.26: ಕಾಪು ತಾಲೂಕು ಕೇವಲ ಘೋಷಣೆ ಅಲ್ಲ. ಅದರ ಉದ್ಘಾಟನಾ ಸಮಾರಂಭ ಎ.2ರಂದು ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು. ಕಾಪು ತಾಲೂಕು ಘೋಷಣಾ ಸಂಭ್ರಮಾಚರಣೆಯ ಪ್ರಯುಕ್ತ ಕಾಪುವಿನ ಶ್ರೀ ಲಕ್ಷ್ಮೀ ಜನಾದರ್ನ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಜರಗಿದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳು: ಪ್ರಸಕ್ತ ವಾರ್ಷಿಕ ವರ್ಷದಲ್ಲಿ 6 ಸಾವಿರ ಮನೆಗಳನ್ನು, ಕಾಪು ಪುರಸಭಾ ವ್ಯಾಪ್ತಿಯೊಳಗೆ 1 ಸಾವಿರ ಫ್ಲಾಟ್‌ಗಳನ್ನು ನಿವೇಶನ ರಹಿತರಿಗೆ ನೀಡುವ ಗುರಿ ಇದೆ. ಕಾಪು-ಶಿರ್ವ, ಕಟಪಾಡಿ-ಶಿರ್ವ, ನಂದಿಕೂರು-ಶಿರ್ವ, ಒಂತಿಬೆಟ್ಟು-ಆತ್ರಾಡಿ-ಕುಂಜಾರುಗಿರಿ ಸಂಪರ್ಕ ರಸ್ತೆಯನ್ನು ದ್ವಿಪಥಗೊಳಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ಸಿಕ್ಕಿದೆ. 7 ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. 2 ಹೊಸ ಸೇತುವೆಗಳ ನಿರ್ಮಾಣಕ್ಕೂ ಪ್ರಸ್ತಾಪ ಸಲ್ಲಿಸಲಾಗಿದೆ. ಸಯನ್ಸ್ ಸೆಂಟರ್ ನಿರ್ಮಾಣಕ್ಕೆ 50 ಕೋಟಿ ರೂ. ಬಿಡುಗಡೆಯಾಗಿದೆ. ಹೆಜಮಾಡಿ ಬಂದರು ರಚನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದರು

ಕಾಪು ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಕಾಪು ಲೀಲಾಧರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾಪು ಜುಮಾ ಮಸೀದಿ ಧರ್ಮಗುರು ಇರ್ಶಾದ್ ಸಅದಿ, ಶಿರ್ವ ಚರ್ಚ್ ಧರ್ಮಗುರು ರೆ.ಫಾ.ಸ್ಟಾನಿ ತಾವ್ರೋ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿ, ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಮಾತನಾಡಿದರು. ಕಾಪು ಪುರಸಭಾಧ್ಯಕ್ಷೆ ಸೌಮ್ಯಾ ಸಂಜೀವ, ವಾಸುದೇವ ಶೆಟ್ಟಿ, ಮನೋಹರ್ ಶೆಟ್ಟಿ, ಯೋಗೀಶ್ ವಿ ಶೆಟ್ಟಿ ಬಾಲಾಜಿ, ಸುಧೀರ್ ಹೆಗ್ಡೆ, ಮೋಹನ ಬಂಗೇರ, ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಶ್ರೀಧರ ಶೆಣೈ, ಶ್ರೀಕರ ಕರ್ಕೇರ, ಗೀತಾ ವಾಗ್ಳೆ, ವಿಲ್ಸನ್ ರೊಡ್ರಿಗಸ್, ಅಶೋಕ್ ಸುವರ್ಣ, ನವೀನ್‌ಚಂದ್ರ ಜೆ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News