ಜಮ್ಮು -ಕಾಶ್ಮೀರದ ವಕ್ಫ್ ಸಚಿವರ ಮನೆ ಮೇಲೆ ಉಗ್ರರ ದಾಳಿ: ಓರ್ವ ಪೊಲೀಸ್ ಪೇದೆಗೆ ಗಾಯ
Update: 2017-03-27 11:19 IST
ಶ್ರೀನಗರ, ಮಾ.27: ಜಮ್ಮು ಮತ್ತು ಕಾಶ್ಮೀರದ ಹಜ್ ಮತ್ತು ವಕ್ಫ್ ಸಚಿವ ಫಾರೂಕ್ ಅಂದ್ರಾಬಿ ಮನೆ ಮೇಲೆ ರವಿವಾರ ರಾತ್ರಿ ಶಂಕಿತ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ
ಜಮ್ಮು ಮತ್ತು ಕಾಶ್ಮೀರದ ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಅವರ ಹತ್ತಿರದ ಸಂಬಂಧಿಯಾಗಿರುವ ಸಚಿವ ಫಾರೂಕ್ ಅಂದ್ರಾಬಿ ಅವರ ಅನಂತನಾಗ್ ಜಿಲ್ಲೆಯ ಶಿಶ್ಟೆರ್‌ಗಮ್ ಎಂಬಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಉಗ್ರರು ಅಲ್ಲಿದ್ದ ಪೊಲೀಸ್ ಪೇದೆಯ ಮೇಲೆ ಗುಂಡು ಹಾರಿಸಿ ಆತನ ಕೈಯಲ್ಲಿದ್ದ ರೈಫಲನ್ನು ಕಿತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಇದರೊಂದಿಗೆ ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ಎರಡನೇ ದಾಳಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.