ದಿಲ್ಲಿ: ಆಮ್ ಆದ್ಮಿ ಶಾಸಕ ವೇದ್‌ಪ್ರಕಾಶ್ ಬಿಜೆಪಿಗೆ
ಹೊಸದಿಲ್ಲಿ,ಮಾ. 27: ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಚುನಾವಣೆ ಮುಂದಿನ ತಿಂಗಳು ನಡೆಯಲಿಕ್ಕಿರುವಂತೆ ಆಮ್ ಆದ್ಮಿ ಪಕ್ಷದ ಶಾಸಕ ವೇದ್‌ಪ್ರಕಾಶ್ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ. 2015ರ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಪಾಲಿಸಲು ಎಎಪಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ತನ್ನ ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಆಮ್ ಆದ್ಮಿ ಪಾರ್ಟಿಯ 35 ಶಾಸಕರು ನಿರಾಶರಾಗಿದ್ದಾರೆ. ಶಾಸಕ ಸ್ಥಾನಕ್ಕೂ ಮತ್ತು ಎಲ್ಲ ಅಧಿಕೃತ ಸ್ಥಾನಮಾನಗಳಿಗೂ ರಾಜಿನಾಮೆ ನೀಡುವೆ. ಶೀಘ್ರದಲ್ಲಿಸ್ಪೀಕರ್‌ಗೆ ರಾಜಿನಾಮೆ ಪತ್ರ ಸಲ್ಲಿಸುವೆ ಎಂದು ವೇದ್‌ಪ್ರಕಾಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಯ ಉಪಸ್ಥಿತಿಯಲ್ಲಿ ವೇದ್‌ಪ್ರಕಾಶ್ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಪ್ರಧಾನಿನರೇಂದ್ರ ಮೋದಿಯ ನಾಯಕತ್ವದಡಿಯಲ್ಲಿ ಕೆಲಸಮಾಡಲು ಬಯಸುತ್ತೇನೆ. ಆದ್ದರಿಂದ ತಾನು ಬಿಜೆಪಿ ಸೇರಿದೆ ಎಂದು ವೇದ ಪ್ರಕಾಶ್ ತಿಳಿಸಿದ್ದಾರೆ. ದಿಲ್ಲಿಕಾರ್ಪೊರೇಷನ್ ಚುನಾವಣೆ ಇರುವುದರಿಂದ ವೇದ್ ಪ್ರಕಾಶ್‌ರ ರಾಜಿನಾಮೆ ಮುಖ್ಯಮಂತ್ರಿ ಕೇಜ್ರಿವಾಲ್‌ಗೆಬಹುದೊಡ್ಡ ಹಿನ್ನಡೆಯೆಂದು ವಿಶ್ಲೇಷಿಸಲಾಗುತ್ತಿದೆ.