ಇಂಟಕ್ ರಾಜ್ಯಾಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ
Update: 2017-03-27 18:11 IST
ಮಂಗಳೂರು, ಮಾ.27: ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್) ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆಯಾಗಿದ್ದಾರೆ.
ಕಾರ್ಯಾಧ್ಯಕ್ಷರಾಗಿ ಎಸ್.ಎಸ್. ಪ್ರಕಾಶಮ್, ಪೋಷಕರಾಗಿ ಸಚಿವ ಕೆ.ಜೆ. ಜಾರ್ಜ್, ಸಲಹೆಗಾರರಾಗಿ ಎನ್.ಎಂ. ಅಡ್ಯಂತಾಯ, ಉಪಾಧ್ಯಕ್ಷರಾಗಿ ಸನತ್ ಕುಮಾರ್, ಎನ್.ಆರ್. ಹೆಗ್ಡೆ, ಎನ್.ಎಂ. ಮುತ್ತಪ್ಪ, ಎನ್.ರವೀಂದ್ರ, ಸಿ.ಎ. ರಹೀಂ, ಎಂ.ಕೆ. ಸುಹೈಲ್ ನೇಮಕಗೊಳಿಸಿ ರಾಷ್ಟ್ರಾಧ್ಯಕ್ಷ ಡಾ.ಜಿ. ಸಂಜೀವ ರೆಡ್ಡಿ ಆದೇಶಿಸಿದ್ದಾರೆ.
ದ.ಕ.ಜಿಲ್ಲಾ ಸರ್ವ ಕಾಲೇಜು ಸಂಘದ ಮಾಜಿ ಅಧ್ಯಕ್ಷರಾಗಿದ್ದ ರಾಕೇಶ್ ಮಲ್ಲಿ ಈ ಹಿಂದೆ ಜಿಲ್ಲಾ ಇಂಟಕ್ ಮತ್ತು ರಾಜ್ಯ ಇಂಟಕ್‌ನ ಪದಾಧಿಕಾರಿಯಾಗಿದ್ದರು. ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಮತ್ತು ಕಲಾಂಗಣ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡಮಿಯ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.