×
Ad

ಮಾ.29ರಂದು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯದ ಘಟಿಕೋತ್ಸವ

Update: 2017-03-27 19:38 IST

ಮಂಗಳೂರು.ಮಾ,27:ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಸಂಸ್ಥೆಯ 27 ನೆ ಘಟಿಕೋತ್ಸವ ಮಾರ್ಚ್ 29ರಂದು ಫಾದರ್ ಮುಲ್ಲಾರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯದ ದೇರಳ ಕಟ್ಟೆ ಸಭಾಂಗಣದಲ್ಲಿ ಬೆ.10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ವಿನ್ಸೆಂಟ್ ಸಲ್ದಾನ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದಿಂದ ಗುರುತಿಸಲ್ಪಟ್ಟಿದ್ದು ಹೋಮಿಯೋಪಥಿ ರಾಷ್ಟ್ರೀಯ ಪರಿಷತ್ ಮತ್ತು ದೆಹಲಿಯ ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದಿದೆ.

  ಮಹಾವಿದ್ಯಾಲಯ ಹೋಮಿಯೋಪಥಿ ವೈದ್ಯಕೀಯ ಪದವಿ ಮತ್ತು ಹೋಮಿಯೋ ಪಥಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ನಡೆಸುತ್ತಿದ್ದು ರಾಜ್ಯದಲ್ಲಿಯೇ ಹೋಮಿಯೋಪಥಿ ಸ್ನಾತಕೋತ್ತರ ಪದವಿಯಲ್ಲಿ 7 ವಿಶೇಷತೆಗಳನ್ನು ಹೊಂದಿರುವ ಏಕೈಕ ಮಹಾವಿದ್ಯಾಲಯವಾಗಿದೆ.ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ ಎ ಗ್ರೇಡ್ ಮಾನ್ಯತೆ ಪಡೆದಿರುವ (ನ್ಯಾಕ್) ಪ್ರಥಮ ಹೋಮಿಯೋಪಥಿ ಮಹಾವಿದ್ಯಾಲಯ ಇದಾಗಿದೆ.ಈ ಬಾರಿಯ ಘಟಿಕೋತ್ಸವದಲ್ಲಿ 79 ಹೋಮಿಯೋಪಥಿ ಪದವಿ, 23 ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಂ.ವಿನ್ಸೆಂಟ್ ಸಲ್ದಾನ ತಿಳಿಸಿದ್ದಾರೆ.
 
  ಘಟಿಕೋತ್ಸವ ಸಮಾರಂಭದಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಮುಖ್ಯ ಅತಿಥಿಗಳಾಗಿ ಹಾಗೂ ಆಯುಷ್ ಇಲಾಖೆಯ ರಾಜ್ಯ ನಿರ್ದೇಶಕ ರಾಜ್ ಕಿಶೋರ್ ಸಿಂಗ್, ಫಾದರ್ ಮುಲ್ಲಾರ್ ಸೇವಾಸಂಸ್ಥೆಗಳ ಅಧ್ಯಕ್ಷ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಅಧ್ಯಕ್ಷ ಅತೀ.ವಂ.ಡಾ.ಅಲೊಶಿಯಸ್ ಪೌಲ್ ಡಿ ಸೋಜ ಅಧ್ಯಕ್ಷತೆ ವಹಿಸಲಿದ್ದು,ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಪ್ರಭಾರ ನಿರ್ದೇಶಕ ರಿಚಡ್ಸ್ ಕುವೆಲ್ಲೋ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವಿನ್ಸೆಂಟ್ ಸಲ್ದಾನಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪ ಆಡಳಿತಾಧಿಕಾರಿ ವಂ.ಸಿಲ್ವೆಸ್ಟರ್ ಲೋಬೊ,ಪ್ರಾಂಶುಪಾಲ ಡಾ.ಶಿವಪ್ರಸಾದ್ ಕೆ,ಉಪ ಪ್ರಾಂಶುಪಾಲ ಡಾ.ಇ.ಎಸ್.ಜಿ.ಪ್ರಭು,ಹೋಮಿಯೋಪಥಿ ಮೆಟಿರಿಕಾ ಮೆಡಿಕಾ ವಿಭಾಗದ ಮುಖ್ಯಸ್ಥ ಡಾ.ಶ್ರೀನಾಥ್ ರಾವ್,ಮಾಧ್ಯಮ ಸಮಿತಿ ಸಂಯೋಜಕ ಡಾ.ಬ್ಲಾನಿ ಲೋಬೊ,ಮಾಧ್ಯಮ ಸಮಿತಿ ಸದಸ್ಯರಾದ ಡಾ ದೀಪಾ ಪಾಯ್ಸಾ ಹಾಗೂ ಡಾ.ಜೋನ್ ಪೌಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News