ವಿದ್ಯುತ್ ಚಾಲಿತ ಶೀತಲೀಕೃತ ಶವಪೆಟ್ಟಿಗೆ ಉಚಿತ ಸೇವೆ
ಉಡುಪಿ, ಮಾ.27: ಉಡುಪಿಯ ದಿ.ಎನ್.ಶ್ರೀಪತಿ ಬಲ್ಲಾಳ್ ಮತ್ತು ದಿ.ಎನ್.ಪದ್ಮಾಕ್ಷಿ ಬಲ್ಲಾಳ್ ಇವರ ಮಕ್ಕಳು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ಗೆ ವಿದ್ಯುತ್ ಚಾಲಿತ ಶೀತಲೀಕೃತ ಶವಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಇಂದು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯ ದರ್ಶಿ ನಿತ್ಯಾನಂದ ಒಳಕಾಡು, ಸುಮಾರು 90ಸಾವಿರ ರೂ. ವೆಚ್ಚದ ಶೀತ ಲೀಕೃತ ಶವಪೆಟ್ಟಿಗೆಯನ್ನು ಸಾರ್ವಜನಿಕ ಉಚಿತ ಉಪಯೋಗಕ್ಕಾಗಿ ನೀಡ ಲಾಗುವುದು ಎಂದು ತಿಳಿಸಿದರು.
ಇದರ ಉದ್ದ 80 ಇಂಚು ಮತ್ತು ಅಗಲ 36 ಇಂಚು ಹಾಗೂ ಎತ್ತರ 18 ಇಂಚು ಆಗಿದೆ. ಇದರ ಉಪಯೋಗ ಪಡೆಯುವವರು ಮಾರುತಿ ವಿಥಿಕಾದಲ್ಲಿರುವ ಸಮಿತಿಯ ಕಚೇರಿಯಿಂದ ತಾವೇ ಸಾಗಾಟ ವೆಚ್ಚವನ್ನು ಭರಿಸಿ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ ವಾಪಾಸು ಸಮಿತಿಯ ಕಚೇರಿಗೆ ತಲುಪಿಸಬೇಕು. ಜಾತಿ ಮತ ಬೇಧವಿಲ್ಲದೆ ಈ ಶವಪೆಟ್ಟಿಗೆಯನ್ನು ಉಚಿತ ವಾಗಿ ನೀಡಲಾಗುವುದು. ಅಗತ್ಯವಿದ್ದವರು ಮೊಬೈಲ್- 9164901111ನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ದಾನಿಗಳಾದ ಎನ್.ಮುರಳೀಧರ್ ಬಲ್ಲಾಳ್, ಸ್ವಾತಿ ಮುರಳೀಧರ ಬಲ್ಲಾಳ್, ಕೆ.ಗಣೇಶ್ ರಾವ್, ಉಡುಪಿ ಚರ್ಚ್‌ನ ಧರ್ಮ ಗುರು ರೆ.ಫಾ.ಫ್ರೆಡಿಕ್ ಮಸ್ಕರೇನಸ್, ನಝೀರ್ ಅಹ್ಮದ್ ಅಂಬಾಗಿಲು,. ಸಲೀಂ ಕೊಡಂಕೂರು ಮೊದಲಾದವರು ಉಪಸ್ಥಿತರಿದ್ದರು.