ಸಿಎನ್‌ಎನ್ ಕಚೇರಿ ಎದುರು ಭಾರತೀಯ ಅಮೆರಿಕನ್ನರ ಪ್ರತಿಭಟನೆ
Update: 2017-03-27 20:35 IST
ವಾಶಿಂಗ್ಟನ್, ಮಾ. 27: ಸಾಕ್ಷಚಿತ್ರವೊಂದರಲ್ಲಿ ಹಿಂದೂ ಧರ್ಮವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು ಶಿಕಾಗೊದಲ್ಲಿರುವ ಸಿಎನ್‌ಎನ್ ಟಿವಿ ಕಚೇರಿಯ ಎದುರು ರವಿವಾರ ಪ್ರತಿಭಟನೆ ನಡೆಸಿದರು.
‘‘ಸಿಎನ್‌ಎನ್ ಪ್ರಸಾರ ಮಾಡಿದ ಸಾಕ್ಷಚಿತ್ರವು ಹಿಂದೂ ಧರ್ಮವನ್ನು ನಕಾರಾತ್ಮಕವಾಗಿ ಬಿಂಬಿಸಿದೆ. ಹಿಂದೂ ಧರ್ಮ ಈ ರೀತಿ ಇಲ್ಲ’’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಭರತ್ ಬರಾಯ್ ಹೇಳಿದರು.
ಸಾಕ್ಷಚಿತ್ರವು ಐದು ಅಘೋರಿ ಬಾವಗಳ ಪದ್ಧತಿಯನ್ನು ತೋರಿಸಿದೆ ಎಂದು ಅವರು ಆರೋಪಿಸಿದರು.
‘‘ಐವರು ವ್ಯಕ್ತಿಗಳ ವಿಕೃತ ಪದ್ಧತಿಗಳು ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲ. ಅವುಗಳು ಹಿಂದೂ ಪುರಾಣಗಳ ಅಥವಾ ಹಿಂದೂ ಗ್ರಂಥಗಳ ಭಾಗವಲ್ಲ’’ ಎಂದರು ಬರಾಯ್ ಹೇಳಿದರು.