ಶ್ರವಣದೋಷ ಜಾಗೃತಿಯ 'ಕಿವಿಮಾತು' ಬೀದಿನಾಟಕ ಪ್ರದರ್ಶನ
ಉಡುಪಿ, ಮಾ.27: ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾಸ್ಪತ್ರೆ, ಜೈಂಟ್ಸ್ ಗ್ರೂಪ್ ಆಫ್ ಉಡುಪಿಯ ಸಹ ಕಾರದೊಂದಿಗೆ ವಿಶ್ವರಂಗಭೂಮಿ ದಿನಾಚರಣೆಯ ಪ್ರಯುಕ್ತ ಉಡುಪಿ ರಂಗ ಭೂಮಿ ಕಲಾವಿದರಿಂದ ಶ್ರವಣ ದೋಷದ ಅರಿವಿನ ಕುರಿತ 'ಕಿವಿಮಾತು' ಬೀದಿ ನಾಟಕ ಪ್ರದರ್ಶನಕ್ಕೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇಂದು ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಬೀದಿನಾಟಕ ಪ್ರದರ್ಶನವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಮುರಳೀಧರ್ ಪಾಟೀಲ್, ಜಯಂಟ್ಸ್ ಗ್ರೂಪ್ ಅಧ್ಯಕ್ಷೆ ಉಷಾ ರಮೇಶ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನಂದ ಕುಮಾರ್, ಮೇಟಿ ಮುದಿಯಪ್ಪ ಮೊದಲಾದವರು ಉಪಸ್ಥಿತರಿದ್ದರು. ರವಿ ರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀಪಾದ ಹೆಗಡೆ ನಿರ್ದೇಶನದ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸಂಗೀತ ರಚನೆಯ ಮತ್ತು ಗೀತಂ ಗಿರೀಶ್ ಸಂಗೀತ ಸಂಯೋಜನೆಯ ಬೀದಿ ನಾಟಕ ಪ್ರದರ್ಶನ ಗೊಂಡಿತು.