×
Ad

ತಲವಾರು ದಾಳಿ ಪ್ರಕರಣ: ಓರ್ವ ಪೊಲೀಸ್ ವಶಕ್ಕೆ

Update: 2017-03-27 21:51 IST

ಉಳ್ಳಾಲ, ಮಾ.27: ರವಿವಾರ ತಡರಾತ್ರಿ ಕೋಡಿ ನಿವಾಸಿ ನೌಷಾದ್ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಮೊಗವೀರಪಟ್ನ ನಿವಾಸಿ ರಮಿತ್ ಎಂಬಾತನೇ ಬಂದಿತ ಆರೋಪಿಯಾಗಿದ್ದಾನೆ. ಅಲ್ಲದೆ ಈತನ ಜತೆಗಿದ್ದ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

ರಮಿತ್ ವರ್ಷದ ಹಿಂದೆ ರಾಜು ಕೋಟ್ಯಾನ್ ಹತ್ಯೆಗೆ ಪ್ರತೀಕಾರವಾಗಿ ಉಳ್ಳಾಲದಲ್ಲಿ ನಫ್ಸಾನ್ ಎಂಬಾತನನ್ನು ಕೊಲೆಗೆ ಯತ್ನಿಸಿ ಜೈಲು ಪಾಲಾಗಿದ್ದ ಆರೋಪಿಯಾಗಿದ್ದಾನೆ. ಜೈಲಿಗೆ ಬಿಡುಗಡೆಗೊಂಡ ಎರಡೇ ದಿನದಲ್ಲಿ ಮತ್ತೆ ಕೊಲೆ ಕೃತ್ಯದಲ್ಲಿ ಭಾಗಿಯಾಗಿ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News