×
Ad

ಮಣಿಪಾಲ: ಎಂಐಟಿ ವಿದ್ಯಾರ್ಥಿ ಮೃತ್ಯು

Update: 2017-03-27 22:00 IST

ಮಣಿಪಾಲ, ಮಾ.27: ಗೆಳೆಯನ ಹುಟ್ಟುಹಬ್ಬ ಆಚರಿಸಿ ಮಲಗಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಎಂಐಟಿ ಎರಡನೆ ವರ್ಷದ ವಿದ್ಯಾರ್ಥಿ, ಧಾರವಾಡದ ರವಿ ಕುಮಾರ್ ಎಂಬವರ ಮಗ ರಜತ್ ಆರ್.ಕಲ್ಮಠ್ ಎಂದು ಗುರುತಿಸಲಾಗಿದೆ. ಇವರು ಮಾ.26ರಂದು ರಾತ್ರಿ ತನ್ನ ಗೆಳೆಯ ನಿಖಿಲ್ ಪಪ್ಪು ಎಂಬಾತನ ಹುಟ್ಟುಹಬ್ಬವನ್ನು ಆಚರಿಸಿ, ಬಳಿಕ ಈಶ್ವರನಗರದಲ್ಲಿರುವ ನಿಖಿಲ್ ಫ್ಲಾಟ್‌ನಲ್ಲಿ ಮಲಗಿದ್ದರು.

ಎದೆ ಉರಿ ಎಂದು ಹೇಳಿ ಮಲಗಿದ್ದ ರಜನ್ ಇಂದು ಬೆಳಗ್ಗೆ ಎದ್ದು ವಾಂತಿ ಮಾಡಿದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಬೆಳಿಗ್ಗೆ 7:45ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ರಜನ್ ಮೃತ ಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News