×
Ad

ಶಾಸಕ ಬಾವಾರ ವಿಲಾಸಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಪಂಪ್‌ನ ಸಿಬ್ಬಂದಿ !

Update: 2017-03-27 22:20 IST

ಮಂಗಳೂರು, ಮಾ. 27: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ ಅವರು ಎರಡು ದಿನಗಳ ಹಿಂದೆ ಖರೀದಿಸಿರುವ ಪೆಟ್ರೋಲ್ ಹಾಗೂ ಬಾಟರಿ ಚಾಲಿತ ವೋಲ್ವೊ ಎಕ್ಸೆಲೆಂಟ್ ಹೈಬ್ರಿಡ್ ಕಾರಿಗೆ ಪೆಟ್ರೋಲ್ ಪಂಪ್‌ನ ಸಿಬ್ಬಂದಿ ತನ್ನ ಅಚಾತುರ್ಯದಿಂದ ಡೀಸೆಲ್ ತುಂಬಿಸಿದ ಪರಿಣಾಮ ಕೆಲವು ಕಾಲ ಗದ್ದಲ ಏರ್ಪಟ್ಟ ಘಟನೆ ಶಿವಭಾಗ್ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.

ಘಟನೆಯಿಂದ ಪೆಟ್ರೋಲ್ ಪಂಪ್‌ನಲ್ಲಿ ಕೆಲವು ಕಾಲ ಗೊಂದಲ ಹಾಗೂ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಬಾವರ ಪುತ್ರ ಮೆಹ್ಸೂಫ್ ಮತ್ತು ಪಂಪ್‌ನ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಮಧ್ಯಪ್ರವೇಶಿಸಿದ ಪಂಪ್‌ನ ಮಾಲಕ ತಪ್ಪೊಪ್ಪಿಗೆ ಪತ್ರವನ್ನು ನೀಡುವ ಮೂಲಕ ಪರಿಸ್ಥಿತಿ ತಿಳಿಯಾಗಿದೆ.

1.65 ಕೋಟಿ ರೂ. ಮೊತ್ತದ ಈ ಹೈಬ್ರಿಡ್ ಕಾರು ಭಾರತದಲ್ಲಿ ಪ್ರಥಮ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಮೊದಿನ್ ಬಾವ ಪ್ರಥಮ ಗ್ರಾಹಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News