×
Ad

​ಅಂಗಡಿಯವನನ್ನು ದೂಡಿ ಹಣ ಲಪಟಾಯಿಸಿದ ಅಪರಿಚಿತರು

Update: 2017-03-27 22:26 IST

ಮಂಗಳೂರು, ಮಾ. 27: ಹಾಲಿನ ಡೈರಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯವನನ್ನು ದೂಡಿ ಡ್ರಾವರ್‌ನಲ್ಲಿದ್ದ 4,500 ರೂ.ವನ್ನು ಲಪಟಾಯಿಸಿ ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಟಿಪಳ್ಳ ನಿವಾಸಿ ಜಗನ್ನಾಥ ಅಮೀನ್ ಎಂಬವರು ರವಿವಾರ ಬೆಳಗ್ಗೆ 5 ಗಂಟೆಗೆ ಕಾಟಿಪಳ್ಳ ಗ್ರಾಮದ, 6ನೆ ಬ್ಲಾಕ್‌ನ ಕೃಷ್ಣಾಪುರ ನಿರಂಜನ್ ಭಟ್‌ರ ಹಾಲಿನ ಡೈರಿಗೆ ತೆರಳಿದ್ದರು. ಸುಮಾರು 5:30ಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಮಜ್ಜಿಗೆಯನ್ನು ಕೇಳಿ ಪಡೆದಿದ್ದಾರೆ. ಅವರಿಂದ ಹಣ ಪಡೆದು ಚಿಲ್ಲರೆಯನ್ನು ಕೊಡಲು ಡ್ರಾವರ್ ಬಳಿ ಬಂದಾಗ ಈ ಅಪರಿಚಿತರು ಅವರನ್ನು ದೂಡಿ ಹಾಕಿ ಡ್ರಾವರ್‌ನಲ್ಲಿದ್ದ 4,500 ನಗದನ್ನು ದೋಚಿದ್ದಾರೆ.

ಈ ಬಗ್ಗೆ ಜಗನ್ನಾಥ ಅವರ ಪತ್ನಿ ಲೀಲಾವತಿ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News