ವಾಹನ ಮಗುಚಿ ನಾಲ್ವರಿಗೆ ಗಾಯ
ಮಂಗಳೂರು, ಮಾ. 28: ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕ್‌ಅಪ್ ವಾಹನವೊಂದು ಮಗುಚಿ ಬಿದ್ದ ಪರಿಣಾಮ ಚಾಲಕ ಸಹಿತ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಅಂಬಿಕಾ ಎಂಟರ್ ಪ್ರೈಸಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಬಶೀರ್ ಅಹ್ಮದ್ ಎಂಬವರು ಕೆಲಸದ ನಿಮಿತ್ತ ಕಂಪೆನಿಯ ಪಿಕ್‌ಅಪ್‌ನಲ್ಲಿ ಪಣಂಬೂರುನಿಂದ ಯಾರ್ಡ್‌ನಿಂದ ರಾ.ಹೆ.66ರಲ್ಲಿ ರವಿವಾರ ರಾತ್ರಿ ಸುಮಾರು 10 ಗಂಟೆಗೆ ಕೊಟ್ಟಾರ ಚೌಕಿ ಕಡೆಗೆ ಪ್ರಯಾಣಿಸುತ್ತಿದ್ದರು.
ಇವರೊಂದಿಗೆ ಚಾಲಕ ಗುರುಮಿತ್ ಸಿಂಗ್‌ದಲ್ಬೀರ್ ಸಿಂಗ್ ಮತ್ತು ಮನದೀಪ್ ಪ್ರಯಾಣಿಸುತ್ತಿದ್ದರು. ರಾ.ಹೆ.ಯ ಪಣಂಬೂರು ಕಸ್ಟಮ್ಸ್ ಕಚೇರಿ ಎದುರು ವಾಹನವು ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಯ ಸೇಫ್ಟಿಸ್ಟೋನ್‌ಗೆ ಢಿಕ್ಕಿ ಹೊಡೆದಿದು ಮಗುಚಿ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಬಶೀರ್ ಅಹ್ಮದ್‌ರಿಗೆ ಎಡಕೈಗೆ ರಕ್ತ ಗಾಯ, ದಲ್ಬೀರ್‌ಸಿಂಗ್‌ಗೆ ಎಡ ಮೊಣಗಂಟಿಗೆ ರಕ್ತ ಗಾಯ, ಚಾಲಕ ಗುರುಮಿತ್ ಸಿಂಗ್‌ಗೆ ಬಲಕಾಲಿಗೆ ರಕ್ತ ಗಾಯ, ಮನದೀಪ್‌ಗೆ ತಲೆ ಹಾಗೂ ಕೈಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಸುರತ್ಕಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.