ಮಣಿಪಾಲ ಲೋಕಲ್ ಬಾಯ್ಸ್ ಗೆ 'ಆರ್ಸಿ ಟ್ರೋಫಿ'
ಮಣಿಪಾಲ, ಮಾ.27: ರಾಜೀವನಗರ ಕ್ರಿಕೆಟರ್ಸ್ ಆಶ್ರಯದಲ್ಲಿ ವಿಕಲ ಚೇತನರ ಮತ್ತು ಬಡಜನರ ಸಹಾಯಾರ್ಥವಾಗಿ ಇತ್ತೀಚೆಗೆ ರಾಜೀವನಗರ ಮೈದಾನದಲ್ಲಿ ನಡೆದ್ದ 6ನೇ ವರ್ಷದ 'ಆರ್ಸಿ ಟ್ರೋಫಿ' ಕ್ರಿಕೆಟ್ ಪಂದ್ಯಾಟ ದಲ್ಲಿ ಮಣಿಪಾಲದ ಲೋಕಲ್ ಬಾಯ್ಸ್ ತಂಡ ಪ್ರಥಮ ಮತ್ತು 44,444 ರೂ. ನಗದು ಬಹುಮಾನ ಗೆದ್ದುಕೊಂಡಿದೆ.
ಅಲೆವೂರಿನ ವೀರಕೇಸರಿ ತಂಡ ರನ್ನರ್ಸ್ ಪ್ರಶಸ್ತಿಯೊಂದಿಗೆ 22,222 ರೂ. ನಗದು ಪುರಸ್ಕಾರವನ್ನು ಪಡೆದುಕೊಂಡಿತು. ಲೋಕಲ್ ಬಾಯ್ಸ್ ತಂಡದ ಹರ್ಷ ಪಂದ್ಯ ಪುರುಷೋತ್ತಮ ಹಾಗೂ ಅದೇ ತಂಡ ನಾಗಾರ್ಜುನ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವೀರಕೇಶರಿ ತಂಡದ ಸುಚಿತ್ ಉತ್ತಮ ದಾಂಡಿಗ ಪ್ರಶಸ್ತಿ ಮತ್ತು ಬಿಜಿ ಫ್ರೆಂಡ್ಸ್ನ ಆಶಿಶ್ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಐದು ಮಂದಿ ವಿಕಲಚೇತನರಿಗೆ ಸಹಾಯಧನವನ್ನು ವಿತರಿಸಲಾಯಿತು. 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಸದಸ್ಯ ವಿಠಲ್ ಅಮೀನ್, ಉಪೇಂದ್ರ ನಾಯಕ್, ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಉದ್ಯಮಿ ಶಶಿ ಮಲ್ಪೆ, ಸುಮತಿ ಶೇರಿಗಾರ್, ಸುನಿಲ್ ಶೇರಿಗಾರ್, ಅಶೋಕ್ ಶೇರಿಗಾರ್, ಕೃಷ್ಣ ಶೆಟ್ಟಿ, ಮಲ್ಲೇಶ್, ಆರ್ಸಿ ತಂಡದ ಮುಖ್ಯಸ್ಥ ನಾಗರಾಜ ರಾಜೀವನಗರ, ಸದಸ್ಯರಾದ ಸುಧೀರ್ ಶೇರಿಗಾರ್, ಶಿವರಾಮ ಆಚಾರ್ಯ, ಸುಧೀರ್ ಪೂಜಾರಿ, ಮಹಮ್ಮದ್ ಕಲ್ಫಾನ್ ಮೊದಲಾದವರು ಉಪಸ್ಥಿತರಿದ್ದರು.