×
Ad

ಅಂಬೇಡ್ಕರ್ ಜನ್ಮದಿನಾಚರಣೆ ಬಗ್ಗೆ ಸಮಾಲೋಚನಾ ಸಭೆ

Update: 2017-03-27 23:23 IST

ಮಲ್ಪೆ, ಮಾ.27: ಸಂವಿಧಾನದ ಶಿಲ್ಪಿಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 126ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ಬಗ್ಗೆ ಮಲ್ಪೆ, ತೊಟ್ಟಂ, ಬಲರಾಮನಗರ ಹಾಗೂ ನೆರ್ಗಿಯ ದಲಿತ ನಿವಾಸಿಗಳ ಸಮಾಲೋಚನಾ ಸಭೆಯು ಮಲ್ಪೆ ಸರಸ್ವತಿ ಯುವಕ ಮಂಡಲದ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

 ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಸ್ತುತ ದೇಶದಲ್ಲಿ ದಲಿತರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ತಿಳಿಸಿದರು. ನಾಡಿನ ದಲಿತ ಯುವಕ ಯುವತಿಯರು ಅಂಬೇಡ್ಕರ್ ಚಿಂತನೆ ಯನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಭಾರತದೊಳಗೆ ಸಮಾನತೆಗಾಗಿ ಎರಡನೇ ಸ್ವಾತಂತ್ರ ಚಳವಳಿ ನಡೆಸುವ ಅನಿವಾರ್ಯತೆ ಎದುರಾಗಳಿವೆ ಎಂದರು.

 ದಲಿತ ಮುಂದಾಳುಗಳಾದ ಹರೀಶ್ ಸಾಲ್ಯಾನ್, ವಸಂತ ತೊಟ್ಟಂ, ಭಗವನ್ ದಾಸ್, ಮಾಲಿಂಗ ಕೋಟ್ಯಾನ್, ಪ್ರಸಾದ್ ನೆರ್ಗಿ, ಕುಮಾರ್ ತೊಟ್ಟಂ, ದೀಪಕ್ ಜಿ., ಸುರೇಶ್ ತೊಟ್ಟಂ, ಮಹೇಶ್ ಬಲರಾಮನಗರ, ಲೋಹಿತ್ ತೊಟ್ಟಂ, ಸಚಿನ್ ಸಾಲ್ಯಾನ್, ಮಣಿತ್‌ರಾಜ್, ಶಶಿಕಲಾ ತೊಟ್ಟಂ, ಜ್ಯೋತಿ ಅಶೋಕ್, ಗೀತಾ ಬಲರಾಮನಗರ, ವಿನೋದ ಜಯ ರಾಜ್, ಪೂರ್ಣಿಮ ಸದಾನಂದ, ಪ್ರಮೀಳ, ಸುಲೋಚನ ತೊಟ್ಟಂ, ಕವಿತಾ, ಸುಮಿತಾ ತೊಟ್ಟಂ, ರೇಣುಕಾ ಮೊದಲಾದವರು ಉಪಸ್ಥಿತರಿದ್ದರು. ಅರುಣ್ ಸಾಲ್ಯಾನ್ ಸ್ವಾಗತಿಸಿ, ವಿಠಲ ಎಂ.ಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News