ಮುಡಿಪು: ಕೊಲಾಜ್ ಚಿತ್ರಪ್ರದರ್ಶನ ಉದ್ಘಾಟನೆ
ಕೊಣಾಜೆ, ಮಾ.27: ಜನಶಿಕ್ಷಣ ಟ್ರಸ್ಟ್, ಚಿತ್ತಾರ ಬಳಗ ಮಂಗಳೂರು ಹಾಗೂ ನ್ಯೂಸ್ ಪಾಯಿಂಟ್ ಮುಡಿಪು ಇದರ ಸಹಭಾಗಿತ್ವದಲ್ಲಿ ಎ.2ರವರೆಗೆ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆಯಲಿರುವ ಮಂಚಿ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯು ಸೋಮವಾರ ನಡೆಯಿತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಪಿ. ಮಾತನಾಡಿ, ಇಂದು ಶಿಕ್ಷಣದ ಮೌಲ್ಯ ಕುಸಿಯುತ್ತಿದ್ದು, ನೈತಿಕ ಶಿಕ್ಷಣದ ಕೊರತೆ ಕಂಡು ಬರುತ್ತಿದೆ, ಇಂತಹ ಸನ್ನಿವೇಶದಲ್ಲಿ ಕೊಲಾಜ್ ಪ್ರದರ್ಶನದಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯಕ್ಕೆ ಸಹಕಾರಿ ಎಂದರು. ಮಂಗಳೂರಿನ ಸ್ವರೂಪ ಅಧ್ಯಯನ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್, ನರೇಗಾ ಯೋಜನೆಯ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಚಿತ್ತಾರ ಬಳಗದ ಸತೀಶ್ ಇರಾ, ಮುಡಿಪು ನ್ಯೂಸ್ ಪಾಯಿಂಟ್ ಮಾಲಕ ವೆಂಕಟೇಶ್ ಎಚ್. ಹಾಗೂ ಮಂಚಿ ಕೊಳ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಸಂಘಟಕ ತಾರನಾಥ್ ಕೈರಂಗಳ ಸ್ವಾಗತಿಸಿದರು. ಸಂತೋಷ್ ವಂದಿಸಿದರು. ಚಂದ್ರಶೇಖರ್ ಪಾತೂರು ಕಾರ್ಯಕ್ರಮ ನಿರೂಪಿಸಿದರು