×
Ad

ಮಾ.30: ಪಾಸ್‌ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ

Update: 2017-03-28 00:04 IST

ಕಾಸರಗೋಡು, ಮಾ.27: ಕಾಸರಗೋಡಿಗೆ ಮಂಜೂರಾಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ ಮಾ.30ರಂದು ಕಾರ್ಯಾರಂಭ ಗೊಳ್ಳಲಿದೆ. ಈ ಬಗ್ಗೆ ಕಚೇರಿಯಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಹೊಸ ಪಾಸ್‌ಪೋರ್ಟ್ ಹಾಗೂ ಪಾಸ್‌ಪೋರ್ಟ್ ನವೀಕರಣಕ್ಕೆ ಮಾತ್ರ ಈ ಕೇಂದ್ರದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಕಾಣೆಯಾದ, ಹಾನಿಗೊಂಡ ಪಾಸ್‌ಪೋರ್ಟ್‌ಗಳು, ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೆಟ್ ಮೊದಲಾದವುಗಳಿಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಥಮ ಹಂತದಲ್ಲಿ 10ರಿಂದ 50 ಅರ್ಜಿಗಳನ್ನು ಸ್ವೀಕರಿಸಲಾ ಗುವುದು. ಮಾ.29ರಿಂದ ಅರ್ಜಿಗಳನ್ನು ಟೋಕನ್ ಮೂಲಕ ಸ್ವೀಕರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News