×
Ad

'ಪ್ರಜನನ ಶಾಸ್ತ್ರ -ಸುಶೃತನು ಕಂಡಂತೆ' ಕೃತಿ ಬಿಡುಗಡೆ

Update: 2017-03-28 19:04 IST

ಉಡುಪಿ, ಮಾ.28: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ಮಹಿಳಾ ಕ್ಷೇಮಾಭಿವೃದ್ಧಿ ಘಟಕದ ವತಿ ಯಿಂದ ಮಂಗಳೂರು ಕೆಎಂಸಿ ಪ್ರಜನನ ಶಾಸ್ತ್ರ ವಿಭಾಗದ ತಜ್ಞ ಡಾ.ಪ್ರಹ್ಲಾದ ಕುಷ್ಟಗಿ ಅನುವಾದಿಸಿದ ಱಪ್ರಜನನ ಶಾಸ್ತ್ರ -ಸುಶೃತನು ಕಂಡಂತೆೞ ಕೃತಿಯ ಬಿಡುಗಡೆ ಸಮಾರಂಭವು ಮಹಾವಿದ್ಯಾಲಯದ ಭಾವಪ್ರಕಾಶ ಸಭಾಂಗಣ ದಲ್ಲಿ ಇತ್ತೀಚೆಗೆ ಜರಗಿತು.

ಉಡುಪಿ ಸರಕಾರಿ ಆಸ್ಪತ್ರೆಯ ನಿವೃತ್ತ ಪ್ರಸೂತಿ ತಜ್ಞೆ ಡಾ.ಸಾವಿತ್ರಿ ದೈತೋಟ ಕೃತಿಯನ್ನು ಬಿಡುಗಡೆಗೊಳಿಸಿದರು. ಡಾ.ಪ್ರಹ್ಲಾದ ಕುಷ್ಟಗಿ ಮಾತನಾಡಿ, ಆಧುನಿಕ ವೈದ್ಯ ಪದ್ಧತಿಯಲ್ಲಿ ಇರುವ ಪ್ರಜನನ ಶಾಸ್ತ್ರದ ಕುರಿತು ಸಾವಿರಾರು ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರದಲ್ಲಿ ವಿವರಿಸಿದೆ. ಇಂದಿನ ಯುವವೈದ್ಯರಿಗೆ ಇದು ದಾರಿದೀಪವಾಗಲಿ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲ ಹಾಗೂ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ವಿಭಾಗದ ಮುಖ್ಯಸ್ಥ ಡಾ.ಪ್ರಭಾಕರ ಯು. ರೆಂಜಾಳ ವಹಿಸಿ ದ್ದರು. ಅಂಕಣಕಾರ ಚಕ್ರವರ್ತಿ ಸೂಲಿಬೆಲೆ, ಜಾದೂಗಾರ ಪ್ರೊ.ಶಂಕರ್ ಉಪಸ್ಥಿತರಿದ್ದರು. ಕಾಲೇಜಿನ ಮಹಿಳಾ ಕ್ಷೇಮಾಭಿವೃದ್ಧಿ ಘಟಕದ ಅಧ್ಯಕ್ಷೆ ಡಾ.ಮಮತಾ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಲಿಖಿತಾ ಡಿ.ಎನ್., ಡಾ.ಹರ್ಷಿತಾ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು. ಡಾ. ಚೇತನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News