ಕಾಪಿಕಾಡು: ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪಲ್ಟಿ
Update: 2017-03-28 19:35 IST
ಉಳ್ಳಾಲ, ಮಾ.28: ತಲಪಾಡಿ ಕಡೆಯಿಂದ ಕಲ್ಲಾಪಿನೆಡೆಗೆ ಅತಿವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದ ಡಿವೈಡರ್‌ಗೆ ಉರುಳಿ ಬಿದ್ದ ಘಟನೆ ರಾ.ಹೆ.66ರ ತೊಕ್ಕೊಟ್ಟು ಕಾಪಿಕಾಡುವಿನಲ್ಲಿ ಮಂಗಳವಾರ ನಡೆದಿದೆ.
ಹೆದ್ದಾರಿಯಲ್ಲಿ ಅತೀವೇಗದಿಂದ ಧಾವಿಸುತ್ತಿದ್ದ ಟಿಪ್ಪರ್ ಎದುರಲ್ಲಿದ್ದ ಬೈಕ್ ಒಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲೆಂದು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಉರುಳಿ ಬಿದ್ದಿದೆ.
ಘಟನೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಟಿಪ್ಪರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.