×
Ad

ಕಂಪ್ಯೂಟರ್‌ಗಳನ್ನು ಮಾನವ ಮೆದುಳಿಗೆ ಜೋಡಿಸುವ ಕಂಪೆನಿ ಸ್ಥಾಪನೆ!

Update: 2017-03-28 20:06 IST

ವಾಶಿಂಗ್ಟನ್, ಮಾ. 28: ಕಂಪ್ಯೂಟರ್‌ಗಳನ್ನು ಮಾನವ ಮೆದುಳಿಗೆ ಜೋಡಿಸುವ ಉದ್ದೇಶದ ‘ನ್ಯೂರಾಲಿಂಕ್ ಕಾರ್ಪ್’ ಎಂಬ ಕಂಪೆನಿಯೊಂದನ್ನು ಟೆಸ್ಲಾ ಇಂಕ್ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಆರಂಭಿಸಿದ್ದಾರೆ ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಮಸ್ಕ್ ಹೇಳಿಕೊಳ್ಳುವಂತೆ, ನ್ಯೂರಾಲಿಂಕ್ ‘ನ್ಯೂರಲ್ ಲೇಸ್’ ತಂತ್ರಜ್ಞಾನವನ್ನು ಬಳಸುತ್ತಿದೆ. ಇಲ್ಲಿ ಸಣ್ಣ ಇಲೆಕ್ಟ್ರೋಡ್‌ಗಳನ್ನು ಮೆದುಳಿಗೆ ಕಸಿ ಮಾಡಲಾಗುವುದು ಹಾಗೂ ಅವುಗಳು ಒಂದು ದಿನ ಮಾನವ ಯೋಚನೆಗಳನ್ನು ಅಪ್‌ಲೋಡ್ ಮತ್ತು ಡೌನ್‌ಲೋಡ್ ಮಾಡಬಹುದಾಗಿದೆ ಎಂದು ಜರ್ನಲ್ ಹೇಳಿದೆ.

ಈ ಬಗ್ಗೆ ಮಸ್ಕ್ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಆದರೆ, ನ್ಯೂರಾಲಿಂಕ್ ಕಂಪೆನಿಯನ್ನು ಕಳೆದ ವರ್ಷದ ಜುಲೈನಲ್ಲಿ ‘ವೈದ್ಯಕೀಯ ಸಂಶೋಧನೆ’ ಎಂಬುದಾಗಿ ಕ್ಯಾಲಿಫೋರ್ನಿಯದಲ್ಲಿ ನೋಂದಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News