'ಬೈಕಂಪಾಡಿ ಎಪಿಎಂಸಿಯಲ್ಲಿ 111 ಗೋದಾಮುಗಳ ಹಂಚಿಕೆಯಾಗಿಲ್ಲ'
ಮಂಗಳೂರು, ಮಾ. 28: ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು 150 ಮಂದಿ ವರ್ತಕರು ಅಡಿಕೆಯನ್ನು ಸುಲಿದು ದಾಸ್ತಾನು ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದು, 111 ಗೋದಾಮುಗಳ ಹಂಚಿಕೆಗೆ ಹಲವಾರು ಬಾರಿ ಪ್ರಕಟನೆಯನ್ನು ನೀಡಿದ್ದಾಗ್ಯೂ ವರ್ತಕರು ಹಂಚಿಕೆಗೆ ಅರ್ಜಿ ಸಲ್ಲಿಸಿರುವುದಿಲ್ಲ ಎಂದು ತೋಟಗಾರಿಕೆ ಸಚಿವ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
ವಿಧಾನಪರಿಷತ್‌ನಲ್ಲಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬೈಕಂಪಾಡಿ ಮಾರುಕಟ್ಟೆಯಲ್ಲಿ ನಿರ್ಮಿಸಿದ ಗೋಡಾನ್‌ಗಳು ಬಳಕೆಯಾಗದೆ ದುಸ್ಥಿತಿಯಲ್ಲಿರಲು ಕಾರಣಗಳೇನು ಎಂಬ ಪ್ರಶ್ನೆಗೆ ಬಂದರು ಪ್ರದೇಶವನ್ನು ಮಾರುಕಟ್ಟೆ ಉಪ ಪ್ರಾಂಗಣ ಎಂದು ಘೋಸಿರುವುದರಿಂದ ಬಂದರು ಪ್ರದೇಶದಲ್ಲಿ ಹೆಚ್ಚಿನ ವ್ಯಾಪಾರ ವವಾಟು ನಡೆಯುತ್ತಿದ್ದು ಬೈಕಂಪಾಡಿ ಮಾರುಕಟ್ಟೆಯಲ್ಲಿ ನಿರ್ಮಿಸಿದ ಗೋಡಾನ್ ಗಳು ಬಳಕೆಯಾಗುತ್ತಿಲ್ಲ. ಮಾರುಕಟ್ಟೆ ಪ್ರಾಂಗಣದಲ್ಲಿ ಲೀವ್ ಆ್ಯಂಡ್ ಲೈಸೆನ್ಸ್ ಆಧಾರದಲ್ಲಿ ಹಂಚಿಕೆ ಮಾಡಲು 143 ಗೋದಾಮುಗಳಿದ್ದು, ಅದರಲ್ಲಿ 111 ಗೋದಾಮುಗಳು ಬೇಡಿಕೆ ಇಲ್ಲದೆ ಖಾಲಿ ಇವೆೆ ಎಂದು ಸಚಿವರು ಉತ್ತರಿಸಿದ್ದಾರೆ.