×
Ad

ಅಕ್ರಮ ಗಾಂಜಾ ಸಂಗ್ರಹಿಸಿದ್ದ ಎಂಐಟಿ ವಿದ್ಯಾರ್ಥಿ ಸೆರೆ

Update: 2017-03-28 21:17 IST

 ಮಣಿಪಾಲ, ಮಾ.28: ವಿದ್ಯಾರತ್ನ ನಗರದಲ್ಲಿರುವ ಮಾಂಡವಿ ಪರ್ಲ್ ಸಿಟಿ ಅಪಾರ್ಟ್‌ಮೆಂಟ್‌ನ ರೂಮ್‌ನಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿಯೊರ್ವನನ್ನು ಉಡುಪಿ ಪೊಲೀಸರು ಮಾ.27ರಂದು ಸಂಜೆ ಬಂಧಿಸಿದ್ದಾರೆ.

ಬಂಧಿತನನ್ನು ಕಾರವಾರದ ಹರಿ ಪೈ(21) ಎಂದು ಗುರುತಿಸಲಾಗಿದೆ. ಮಣಿಪಾಲ ಎಂಐಟಿಯ ಮೆಕೋಟ್ರೋನಿಕ್ ಆರನೆ ಸೆಮಿಸ್ಟರ್‌ನ ವಿದ್ಯಾರ್ಥಿ ಯಾಗಿರುವ ಈತ ತನ್ನ ರೂಮಿನಲ್ಲಿ ಅಕ್ರಮವಾಗಿ ಮಾರಾಟಕ್ಕಾಗಿ ದಾಸ್ತಾನು ಇಟ್ಟಿದ್ದ 1,388 ಕಿ.ಗ್ರಾಂ ಗಾಂಜಾವನ್ನು ಉಡುಪಿ ಡಿವೈಎಸ್ಪಿ ಕುಮಾರ್ ಸ್ವಾಮಿ ನೇತೃತ್ವದ ತಂಡ ಖಚಿತ ಮಾಹಿತಿಯಂತೆ ದಾಳಿ ನಡೆಸಿ ವಶಪಡಿಸಿ ಕೊಂಡಿದೆ.

ಅಲ್ಲದೆ ಆತನ ವಶದಲ್ಲಿದ್ದ ಮೊಬೈಲ್ ಹಾಗೂ ಗಾಂಜಾ ಪುಡಿ ಮಾಡಲು ಉಪಯೋಗಿಸುತ್ತಿದ್ದ ಇಂಡೊಲಿಯಮ್ ಲೋಹದ ಬುರುಡೆಯನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 38,300ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News