ಬಸ್- ಸೈಕಲ್ ಢಿಕ್ಕಿ: ವಿದ್ಯಾರ್ಥಿ ಮೃತ್ಯು
Update: 2017-03-28 21:19 IST
ಅಮಾಸೆಬೈಲು, ಮಾ.28: ಬಸ್ಸೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮಾ.28ರಂದು ಅಮಾಸೆಬೈಲು ಸಮೀಪ ನಡೆದಿದೆ.
ಮೃತರನ್ನು ಹೆಂಗವಳ್ಳಿಯ ಲಕ್ಷ್ಮಣ್ ನಾಕ್ ಎಂಬವರ ಮಗ ವಿಜಯ್ ನಾಕ್(14) ಎಂದು ಗುರುತಿಸಲಾಗಿದೆ.
ಅಮಾಸೆಬೈಲು ಸರಕಾರಿ ಪ್ರೌಢ ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿಯಾಗಿದ್ದ ವಿಜಯ ಸಂಜೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ವಿಜಯ್ ಸ್ಥಳದಲ್ಲೇ ಮೃತಪಟ್ಟರು.ಲಕ್ಷ್ಮಣ್ ನಾಕ್‌ರ ಮೂವರು ಪುತ್ರರಲ್ಲಿ ವಿಜಯ್ ಎರಡನೆಯ ಪುತ್ರ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.