×
Ad

​ಕಳ್ಳಭಟ್ಟಿ ಸಾರಾಯಿ: ಓರ್ವನ ಬಂಧನ

Update: 2017-03-28 21:34 IST

ಕೊಲ್ಲೂರು, ಮಾ.28: ಮುದೂರು ಗ್ರಾಮದ ಉದಯನಗರ ಕೊರಗರ ಕಾಲೋನಿ ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಕೊಲ್ಲೂರು ಪೊಲೀಸರು ಮಾ.27 ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.

 ಉದಯ ನಗರ ಕೊರಗರ ಕಾಲೊನಿಯ ನಿವಾಸಿ ಬೋಳ ಕೊರಗ (60), ಬಂಧಿತ ಆರೋಪಿ.

ಇವರು ತನ್ನ ಮನೆಯ ಬಳಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಸಿಕ್ಕಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳ್ಳಭಟ್ಟಿ ಸಾರಾಯಿ ತಯಾರಿಸಲು ಉಪಯೋಗಿಸುತ್ತಿದ್ದ ಸೊತ್ತು ಗಳು, ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News