ಮಟ್ಕಾ: ಮೂವರ ಸೆರೆ
Update: 2017-03-28 21:52 IST
ಉಡುಪಿ, ಮಾ.28: ನಗರದ ನರ್ಮ್ ಬಸ್ ನಿಲ್ದಾಣದ ಬಳಿ ಮಾ.27ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಮೂಲತಃ ಬಾಗಲಕೋಟೆಯ ಪ್ರಸ್ತುತ ಉದ್ಯಾವರ ಬಲಾಯಿಪಾದೆ ನಿವಾಸಿ ಕರಿಯಪ್ಪ (35) ಎಂಬಾತನನ್ನು ಉಡುಪಿ ನಗರ ಪೊಲೀಸರು ಬಂಧಿಸಿ, 2,330ರೂ. ನಗದು ವಶಪಡಿಸಿ ಕೊಂಡಿದ್ದಾರೆ.
ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.27 ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ನಾವುಂದ ಗ್ರಾಮದ ಎಂ.ಜಿ. ರೋಡ್ ಬಳಿ ಸ್ಥಳೀಯ ನಿವಾಸಿ ಭಾಸ್ಕರ (35) ಎಂಬಾತನನ್ನು, ನಾವುಂದ ಗ್ರಾಮದ ಬಡಾಕೆರೆ ಕ್ರಾಸ್ ಬಳಿ ನಾವುಂದದ ಚಂದ್ರ(51) ಎಂಬಾತನು ಬೈಂದೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.