×
Ad

ಆನ್‌ಲೈನ್‌ನಲ್ಲಿ ಟ್ರಿಮ್ಮರ್ ಖರೀದಿಸಿದವನಿಗೆ ಬಂದಿದ್ದು ಏನು ಗೊತ್ತೇ...?

Update: 2017-03-28 22:29 IST

ಮಂಗಳೂರು, ಮಾ. 28: ಆನ್‌ಲೈನ್ ಮೂಲಕ ಟ್ರಿಮ್ಮರ್‌ನ್ನು ಖರೀದಿಸಿದ ವ್ಯಕ್ತಿಯೋರ್ವರಿಗೆ ಟ್ರಿಮ್ಮರ್ ಬದಲು ಕಲ್ಲುಗಳನ್ನು ಹೊಂದಿರುವ ಪಾರ್ಸಲ್ ಬಂದಿರುವ ಘಟನೆ ಸೋಮವಾರ ನಡೆದಿದೆ.

ಬಂಟ್ವಾಳದ ಇರಾ ನಿವಾಸಿ ಪ್ರಸ್ತುತ ಕೋಟ್ಟಾರದಲ್ಲಿರುವ ಗೌರವ್ ಕೊಟ್ಟಾರಿ ಎಂಬವರು ಮಾ.22ರಂದು ಫ್ಲಿಪ್‌ಕಾರ್ಟ್‌ನಲ್ಲಿ ಟ್ರಿಮರ್‌ರನ್ನು ಖರೀದಿಸಿದ್ದರು. ಆದರೆ ಮಾ.25ರಂದು ಕೊಟ್ಟಾರ ವಿಳಾಸಕ್ಕೆ ಬಂದಿತ್ತು. ಗೌರವ್ ಬಂಟ್ವಾಳದಲ್ಲಿದ್ದುದರಿಂದ ಮಾ. 27ರಂದು ಕೊಟ್ಟಾರಕ್ಕೆ ಬಂದು ಬಂದ ಪಾರ್ಸಲ್‌ನ್ನು ತೆರೆದು ನೋಡಿದಾಗ ಟ್ರಿಮ್ಮರ್‌ನ ಬದಲಿಗೆ ಕಲ್ಲುಗಳಿದ್ದವು ಎಂದು ಗೌರವ್ ತಿಳಿಸಿದ್ದಾರೆ.

ಈ ಬಗ್ಗೆ ಗೌರವ್ ಫ್ಲಿಪ್‌ಕಾರ್ಟ್‌ನವರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News