×
Ad

ಮಾಂಡೋವಿ ಮೋಟಾರ್ಸ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಟ್ರೂ ವ್ಯಾಲ್ಯೂ ಕಾರ್ಸ್‌ ಮೆಗಾ ಸೇಲ್ಸ್ ಮೇಳ

Update: 2017-03-29 00:04 IST

ಮಂಗಳೂರು, ಮಾ.28: ನಗರದ ಪ್ರಸಿದ್ಧ ಮಾರುತಿ ಕಾರುಗಳ ಮಾರಾಟಗಾರರು ಹಾಗೂ ಗ್ರಾಹಕರ ಮೆಚ್ಚುಗೆ ಪಡೆದಿರುವ ಮಾಂಡೋವಿ ಮೋಟಾರ್ಸ್‌ ಸಂಸ್ಥೆಯು ಯುಗಾದಿ ಹಬ್ಬದ ಪ್ರಯುಕ್ತ ನಡೆಸುತ್ತಿರುವ ಮಾರುತಿ ಟ್ರೂ ವ್ಯಾಲ್ಯೂ ಕಾರುಗಳ ಮೆಗಾ ಸೇಲ್ಸ್ ಮೇಳವು ಮಾ.30ರವರೆಗೆ ನಡೆಯಲಿದೆ.

Pre-owned Cars ಈ ಮೇಳದಲ್ಲಿ ವಿವಿಧ ಬಗೆಯ 35,000ರೂ.ನಿಂದ 4,10,000ರೂ. ವರೆಗಿನ ವಿಭಿನ್ನ ಶ್ರೇಣಿಯ ಸುಮಾರು 80 ಕಾರುಗಳು ಪ್ರದರ್ಶನದಲ್ಲಿವೆ. ಈ ಮೇಳವನ್ನು ಬಲ್ಮಠ ಸರ್ಕಲ್ ಹತ್ತಿರ, ಎಸ್.ಸಿ.ಎಸ್. ಆಸ್ಪತ್ರೆಯ ರಸ್ತೆಯಲ್ಲಿರುವ ಶೋರೂಂನಲ್ಲಿ ನಡೆಸುತ್ತಿದ್ದು, ಮೇಳದಲ್ಲಿ ವಿಶೇಷವಾಗಿ ಪ್ರಮಾಣೀಕರಿಸಿದ ಕಾರುಗಳಿಗೆ 5 ವರ್ಷದವರೆಗಿನ ವಾರಂಟಿ, 3 ಉಚಿತ ಸರ್ವಿಸ್ ಹಾಗೂ ವಿನಿಮಯ ಬೋನಸನ್ನೂ ಕೊಡಲಾಗುವುದು.

ಗ್ರಾಹಕರ ಹಿತದೃಷ್ಟಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಲ್ಲದೆ ಹಬ್ಬದ ಪ್ರಯುಕ್ತ ಸ್ಥಳದಲ್ಲಿ ಬುಕ್ಕಿಂಗ್ ಮಾಡಿದವರಿಗೆ 3000ರೂ. ವರೆಗಿನ ಎಕ್ಸಸರೀಸ್‌ಗಳನ್ನು ಉಚಿತವಾಗಿ ನೀಡಲಾಗುವುದು.

Pre-owned Cars ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ನಗರದ ಬಲ್ಮಠ ರಸ್ತೆಯಲ್ಲಿರುವ ಮಾಂಡೋವಿ ಶೋರೂಂ ಅಥವಾ ಎಸ್.ಸಿ.ಎಸ್. ಆಸ್ಪತ್ರೆಯ ರಸ್ತೆಯಲ್ಲಿರುವ ಮಾಂಡೋವಿ ಮೋಟಾರ್ಸ್‌ ಶೋರೂಂನ್ನು ಸಂಪರ್ಕಿಸಬಹುದಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News