×
Ad

ಧೋನಿಯ ಆಧಾರ್ ಮಾಹಿತಿ ಬಹಿರಂಗ ವಿರೋಧಿಸಿ ಪತ್ನಿ ಸಾಕ್ಷಿ ಸಚಿವರಿಗೆ ದೂರು

Update: 2017-03-29 13:09 IST

ಹೊಸದಿಲ್ಲಿ, ಮಾ.29:  ಆಧಾರ್ ಕಾರ್ಡಿನ  ನೋಂದಣಿ  ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಗವರ್ನೆನ್ಸ್ ಟ್ವಿಟ್ಟರ್ ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ  ಖಾಸಗಿ ಮಾಹಿತಿಗಳನ್ನು ಬಹಿರಂಗ ಪಡಿಸಿರುವುದನ್ನು ವಿರೋಧಿಸಿ ಅವರ ಪತ್ನಿ ಸಾಕ್ಷಿ ಸಿಂಗ್ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಿಗೆ ದೂರು ನೀಡಿದ್ದಾರೆ.
ಸಿಎಸ್ ಸಿ ಇ-ಆಡಳಿತ ತಮ್ಮ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಎಂ.ಎಸ್.ಧೋನಿ ಆಧಾರ್ ಕಾರ್ಡ್‌ ಅರ್ಜಿಯನ್ನು  ಬೆರಳಚ್ಚು ಮಾಡುತ್ತಿರುವ ಚಿತ್ರದೊಂದಿಗೆ  ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಕೇಂದ್ರ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ  ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟರ‍್ ಮೂಲಕ ದೂರು ನೀಡಿದ್ದಾರೆ. 
'' ಇನ್ನು ಖಾಸಗಿತನವೆಂಬುದು ಏನಾದರೂ ಇದೆಯೋ ? ತಮ್ಮ ಪತಿಯ ಆಧಾರ್ ಕಾರ್ಡಿನ ಮಾಹಿತಿ ಜೊತೆಗೆ ಅರ್ಜಿಯನ್ನು ಸಾರ್ವಜನಿಕ ಆಸ್ತಿಯೆಂದು ಬಹಿರಂಗಪಡಿಸಲಾಗಿದೆ, ಇದರಿಂದ ತೀವ್ರ ಬೇಸರಗೊಂಡಿದ್ದೇನೆ''. ಎಂದು ಸಾಕ್ಷಿ ಸಿಂಗ್  ಟ್ವೀಟ್  ಮಾಡಿದ್ದಾರೆ
ಸಾಕ್ಷಿಯ ದೂರಿಗೆ ಸ್ಪಂದಿಸಿರುವ ಸಚಿವ ರವಿಶಂಕರ ಪ್ರಸಾದ್‌ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವುದು ಅಕ್ರಮ. ಇದರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ..
ಧೋನಿ ಅವರ ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸಿರುವ ವಿಚಾರವನ್ನು  ತಮ್ಮ ಗಮನಕ್ಕೆ  ತಂದದ್ದಕ್ಕಾಗಿ ಸಾಕ್ಷಿ ಸಿಂಗ್ ಅವರಿಗೆ ಧನ್ಯವಾದ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News