ಎ.1ರಂದು ಕಾಸರಗೋಡು ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ

Update: 2017-03-29 09:30 GMT

ಕಾಸರಗೋಡು, ಮಾ.29:   ಕಾಸರಗೋಡು ಪಾಸ್ ಪೋರ್ಟ್ ಸೇವಾ ಕೇಂದ್ರ ಎ.1ರಂದು ಕಾರ್ಯಾರಂಭಗೊಳ್ಳಲಿದ್ದು, ಇದರ ಪೂರ್ವಭಾವಿಯಾಗಿ ಪರೀಕ್ಷಾರ್ಥ ಕಾರ್ಯ ಬುಧವಾರ ನಡೆಯಿತು.

ನಾಲ್ಕು ತಿಂಗಳ ಮಗು ಸೇರಿದಂತೆ 10 ಮಂದಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.  ಇವರ ಪೈಕಿ ಮೂವರು ಬುಧಾವರ ಬೆಳಿಗ್ಗೆ ಕಚೇರಿಗೆ  ಆಗಮಿಸಿದ್ದರು.

ನಾಲ್ವರು ಸಿಬಂದಿ ಈಗ ಸೇವಾ ಕೇಂದ್ರದಲ್ಲಿದ್ದು, ಒಟ್ಟು 12  ಮಂದಿಯನ್ನು ನೇಮಿಸಲಾಗಿದೆ.  ಈಗ ದಿನಕ್ಕೆ 10 ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ  ಇನ್ನಷ್ಟು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅಲ್ಲದೆ ಆಗಸ್ಟ್ ನಿಂದ 150 ಅರ್ಜಿಗಳಿಗೆ ವ್ಯವಸ್ಥೆ ಕಲ್ಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News