×
Ad

ಮಾಂಸ ಪ್ಯಾಕೇಜಿಂಗ್ ಘಟಕದ ಮೇಲಿನ ದಾಳಿಯಲ್ಲಿ ಸಿಕ್ಕಿಬಿದ್ದ ಖ್ಯಾತ ಗೋರಕ್ಷಕ ನಾಯಕ !

Update: 2017-03-29 15:26 IST

ಮೀರತ್, ಮಾ.29:  ಅಕ್ರಮವಾಗಿ ಮಾಂಸ ಪ್ಯಾಕೇಜ್‌ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನ ಅಡ್ಡಗೆ ದಾಳಿ ನಡೆಸಿದ ಬಜರಂಗ ದಳದ ಕಾರ್ಯಕರ್ತರು ಆತನನ್ನು ಹಿಡಿದು ಥಳಿಸಿದ ಘಟನೆ ಭೀಮ್‌ ನಗರದಲ್ಲಿ ರವಿವಾರ ನಡೆದಿದೆ.
ರಾಹುಲ್ ಠಾಕೂರ‍್ ಎಂಬವರೇ ಅಕ್ರಮವಾಗಿ ಮಾಂಸದ ಅಂಗಡಿ ನಡೆಸುತ್ತಿರುವ ಆರೋಪದಲ್ಲಿ ಬಜರಂಗ ದಳದ ಕಾರ್ಯಕರ್ತರಿಂದ ಪೆಟ್ಟು ತಿಂದ ಗೋರಕ್ಷಕ.


ಹೆಸರಿಗೆ ಕ್ರಿಕೆಟ್‌ ಬ್ಯಾಟ್‌  ತಯಾರಿಕಾ ಘಟಕದ ಸೋಗಿನಲ್ಲಿ ರಾಹುಲ್‌ ಠಾಕೂರ್‌ ಅಲ್ಲಿ ಮಾಂಸದ ಪ್ಯಾಕೆಜಿಂಗ್ ದಂದೆಯಲ್ಲಿ ತೊಡಗಿದ್ದ ಎಂದು ತಿಳಿದು ಬಂದಿದೆ. ಬಜರಂಗ ದಳದ ಕಾರ್ಯಕರ್ತರು ಮಾಂಸ ಪ್ಯಾಕೆಜಿಂಗ್‌ ಅಂಗಡಿಗೆ ದಾಳಿ ನಡೆಸಿ ಅಂಗಡಿಯ ಮಾಲಕರಾದ ರಾಹುಲ್ ರಾಘವ್‌ ಮತ್ತು ಅಂಜು ಚೌಧರಿಯನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಪೊಲಿಸರಿಗೆ ಮಾಹಿತಿ ನೀಡಿರೆನ್ನಲಾಗಿದೆ.


 ಪೊಲೀಸರು ಸ್ಥಳಕ್ಕಾಗಮಿಸಿ ಅಕ್ರಮವಾಗಿ ಶೇಖರಿಸಿಟ್ಟದ್ದ ಮಾಂಸವನ್ನು ವಶಪಡಿಸಿಕೊಳ್ಳುವ ಹೊತ್ತಿಗೆ ಬಿಜೆಪಿ ಕಾರ್ಯಕರ್ತ  ರಾಹುಲ್‌  ಠಾಕೂರ್‌ ಅಲ್ಲಿಗೆ ಆಗಮಿಸಿದ ಎಂದು ತಿಳಿದು ಬಂದಿದೆ.  ತಾನು ಮಾಧ್ಯಮದವರಿಗೆ ಮಾಹಿತಿ  ನೀಡಲು ಬಂದಿರುವುದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎನ್ನಲಾಗಿದೆ.
ಬಜರಂಗದಳದ ಕಾರ್ಯಕರ್ತರು ಆತನನ್ನು ಹಿಡಿದು ಪರಿಶೋಧಿಸಿದಾಗ ಆತನ ಮೊಬೈಲ್‌ನಲ್ಲಿ ಮಾಂಸ ಪ್ಯಾಕೆಜಿಂಗ್‌ ಘಟಕದ ಮಾಲಕರ ಮಾಡಿರುವ ಮಿಸ್‌ ಕಾಲ್ ದಾಖಲಿರುವುದು ಬೆಳಕಿಗೆ ಬಂತು ಎನ್ನಲಾಗಿದೆ. ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.


 ಗಾಯಗೊಂಡಿರುವ ರಾಹುಲ್‌ ಸರಕಾರಿ ಮೆಡಿಕಲ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ. ತನ್ನ ಮೇಲೆ ಹನ್ನೆ ನಡೆಸಿದ ಬಜರಂಗ ದಳದ ಕಾರ್ಯಕರ್ತರ  ವಿರುದ್ಧ  ಕಠಿಣ ಕೇಸ್‌ ದಾಖಲಿಸುವ ಉದ್ದೇಶಕ್ಕಾಗಿ ವೈದ್ಯರಲ್ಲಿ  ತನ್ನ ಮುಖಕ್ಕೆ ಹರಿತವಾದ ಆಯುಧದಿಂದ ಆಗಿರುವ ಗಾಯವೆಂದು ವರದಿ ನೀಡುವಂತೆ ಹೇಳಿದ ಎನ್ನಲಾಗಿದೆ. ಆದರೆ ವೈದ್ಯರು ನಿರಾಕರಿಸಿದರು.


ಠಾಕೂರ್‌ ಬಿಜೆಪಿ ಕಾರ್ಯಕರ್ತನಾಗಿದ್ದು, ಮಾಂಸ ಪ್ಯಾಕೆಜಿಂಗ್‌ ಮಾಡುವ ದಂಧೆಯಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯಾಧರಗಳು ದೊರೆತಿದೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕರುನೇಶ್‌ ನಂದನ್‌ ಗಾರ್ಗ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್‌ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಕಸಾಯಿಖಾನೆಗಳು ಬಂದ್‌ ಆಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News