ಎ.1ರಂದು ಬ್ಯಾಂಕ್‌ಗಳು ತೆರೆದಿರಬೇಕಿಲ್ಲ:ಆರ್‌ಬಿಐ

Update: 2017-03-29 11:06 GMT

ಮುಂಬೈ,ಮಾ.29: ತನ್ನ ಹಿಂದಿನ ಆದೇಶವನ್ನು ಪರಿಷ್ಕರಿಸಿರುವ ಆರ್‌ಬಿಐ, ಸರಕಾರಿ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಬ್ಯಾಂಕ್ ಶಾಖೆಗಳು ವಾರ್ಷಿಕ ಮುಕ್ತಾಯ ವಹಿವಾಟಿನ ಹಿನ್ನೆಲೆಯಲ್ಲಿ ಎ.1ರಂದು ತೆರೆದಿರಬೇಕಾದ ಅಗತ್ಯವಿಲ್ಲ ಎಂದು ಬುಧವಾರ ತಿಳಿಸಿದೆ.

ಸರಕಾರದ ಸ್ವೀಕೃತಿಗಳು ಮತ್ತು ಪಾವತಿಗಳಿಗೆ ಅನುಕೂಲ ಕಲ್ಪಿಸಲು ಶನಿವಾರ, ರವಿವಾರ ಮತ್ತು ಎಲ್ಲ ರಜಾದಿನಗಳು ಸೇರಿದಂತೆ ಮಾ.25ರಿಂದ ಎ.1ರವರೆಗೆ ತೆರೆದಿರುವಂತೆ ಆರ್‌ಬಿಐ ತನ್ನ ಮಾ.24ರ ಆದೇಶದಲ್ಲಿ ಎಲ್ಲ ಅಧಿಕೃತ ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಆರ್‌ಬಿಐನ ಸಂಬಂಧಿತ ವಿಭಾಗಗಳಿಗೂ ಈ ಆದೇಶ ಅನ್ವಯವಾಗಿತ್ತು.

ಈ ಬಗ್ಗೆ ಪುನರ್‌ಪರಿಶೀಲನೆ ನಡೆಸಿದ್ದು, ಬ್ಯಾಂಕ್ ಶಾಖೆಗಳು ಎ.1ರಂದು ತೆರೆದಿರಬೇಕಾದ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ತನ್ನ ಪರಿಷ್ಕೃತ ನಿರ್ದೇಶದಲ್ಲಿ ತಿಳಿಸಿದೆ.

ಪ್ರತಿ ವರ್ಷ ಎ.1ರಂದು ವಾರ್ಷಿಕ ಲೆಕ್ಕಪತ್ರ ಮುಕ್ತಾಯಕ್ಕಾಗಿ ಬ್ಯಾಂಕುಗಳು ಸಾರ್ವಜನಿಕರಿಗೆ ಮುಚ್ಚಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News