ರಾಜ್ಯಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ

Update: 2017-03-29 16:27 GMT

ಹೊಸದಿಲ್ಲಿ, ಮಾ.29: ಕೆಲವು ತಿದ್ದುಪಡಿಗಳೊಂದಿಗೆ  ರಾಜ್ಯಸಭೆಯಲ್ಲಿ ಇಂದು  ಹಣಕಾಸು ಮಸೂದೆಯನ್ನು ಅಂಗೀಕರಿಸಲಾಯಿತು.

ಹಣಕಾಸು ಮಸೂದೆ 2017 ಅಂಗೀಕಾರ ನೀಡುವ ಮುನ್ನ ಕೆಲವೊಂದು ತಿದ್ದುಪಡಿಗಾಗಿ ವಿಪಕ್ಷಗಳು ಒತ್ತಾಯಿಸಿದ್ದವು.
ಕಾಂಗ್ರೆಸ್ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಮೂರು ತಿದ್ದುಪಡಿಗೆ ಮತ್ತು  ಸಿಪಿಐ(ಎಂ) ಸದಸ್ಯ ಸೀತಾರಾಂ ಯೆಚೂರಿ ಅವರು ಎರಡು ತಿದ್ದುಪಡಿಗೆ  ಸೂಚಿಸಿದ್ದರು. ಈ ತಿದ್ದುಪಡಿಗೆ ರಾಜ್ಯಸಭೆಯಲ್ಲಿ 34 ಮತಗಳೊಂದಿಗೆ ಅಂಗೀಕಾರಗೊಂಡಿದೆ.

ಮತದಾನದ  ವೇಳೆ 10 ಸದಸ್ಯರಿರುವ ತೃಣಮೂಲ ಕಾಂಗ್ರೆಸ್ ಸದನದಿಂದ ಹೊರ ನಡೆದಿತ್ತು. ಇದಕ್ಕೂ ಮೊದಲು ಹಣಕಾಸು ಮಸೂದೆಯ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದರಿಂದ ಆದಾಯ ತೆರಿಗೆಯಲ್ಲಿ  ವಂಚನೆ  ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಯುಪಿಎ ಸರಕಾರ ಜಾರಿಗೆ ತಂದಿದ್ದ ಆಧಾರ್ ನ್ನು ಎನ್‌ಡಿಎ ಸರಕಾರ ವಿಸ್ತರಿಸಿದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟರು.
ಇದಕ್ಕೂ ಮೊದಲು ಲೋಕಸಭೆಯಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ(ಜಿಎಸ್‌ಟಿ) ಕೆಲವೊಂದು ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡಿತು. ಸತತ 9 ಗಂಟೆಗಳ ಚರ್ಚೆಯ ಬಳಿಕ ಐತಿಹಾಸಿಕ ಜಿಎಸ್‌ಟಿ ಮಸೂದೆಗೆ ಕೊನೆಗೂ ಅಂಗೀಕಾರ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News