ಅಂತರ್ಯದಲ್ಲಿ ಸೃಷ್ಟಿಯಾಗುವ ಜ್ಞಾನವೇ ಶ್ರೇಷ್ಠ : ಡಾ ಅಮರೇಶ ನುಗಡೋಣಿ

Update: 2017-03-29 17:55 GMT

ಮೂಡುಬಿದಿರೆ,ಮಾ.29 :ಧರ್ಮಗ್ರಂಥಗಳನ್ನು ಓದಿ ಸಂಪಾದಿಸುವ ಜ್ಞಾನವು ಹೊರಗಿನಿಂದ ಪಡೆಯುವ ಜ್ಞಾನವಾಗಿದ್ದು ನಮ್ಮ ಆಂತರ್ಯದಲ್ಲಿ ಸೃಷ್ಟಿಯಾಗುವ ಜ್ಞಾನವೇ ನಿಜವಾ   ಹಾಗೂ ಶ್ರೇಷ್ಠವಾದ ಜ್ಞಾನಎಂದು     ಪ್ರಸಿದ್ಧ ಕಥೆಗಾರ ಹಾಗೂ ಹಂಪಿ ಕನ್ನಡ ವಿ.ವಿ.ಯ ಪ್ರಾಧ್ಯಾಪಕರೂ ಆಗಿರುವ ಡಾ. ಅಮರೇಶ ನುಗಡೋಣಿಯವರು ಹೇಳಿದರು.

  ಅವರು ಕಾಂತಾವರ ಅಲ್ಲಮಪ್ರಭು ಪೀಠದ ಅನುಭವದ ನಡೆ ಅನುಭಾವದ ನುಡಿತಿಂಗಳ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪಂಜಜೆ ಶಂಕರ ಭಟ್ಟ ಪ್ರತಿಷ್ಠಾನ ಇವರ ದತ್ತಿನಿಧಿ ಉಪನ್ಯಾಸದಲ್ಲಿ ಶೂನ್ಯ ಸಂಪಾದನೆಗಳು ಗ್ರಹಿಸಿದ ಅಲ್ಲಮಪ್ರಭುವಿನ ಸ್ವರೂಪಎಂಬ ವಿಷಯದ ಕುರಿತು ಮಾತನಾಡಿದರು.

    ಶರಣರು ಹಾಗೂ ವಚನಕಾರರು ದುಡಿಮೆಗೆ ಅತ್ಯುನ್ನತ ಗೌರವವನ್ನು ನೀಡಿ ಕಾಯಕಧರ್ಮವನ್ನೇ ಪ್ರಧಾನವಾಗಿಟ್ಟುಕೊಂಡು ಜಾತಿಬೇಧವಿಲ್ಲದೆ ನಡೆಸಿದ ಚಳವಳಿ ಮತ್ತು ನೀಡಿದ ಜ್ಞಾನವು ಶ್ರೇಷ್ಠವಾದುದರಿಂದ ಅದೇ ಒಂದು ಸಂಸ್ಕೃತಿಯಾಗಿ ಬೆಳೆಯಿತು. ಕಲಿತದ್ದದನ್ನು ಮರೆತಮೇಲೆ ಉಳಿಯುವುದೇ ಸಂಸ್ಕೃತಿ ಅನ್ನುವ ಮಾತಿಗೆ ಪೂರಕವೆನ್ನುವಂ ತೆ ಶರಣ ಸಂಸ್ಕೃತಿ ಬೆಳೆದು ಬಂದಿದೆಎಂದರು.

ಚಂದ್ರಕಾಂತ ಬೆಲ್ಲದ್ ಧಾರವಾಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀಮತಿ ಸವಿತಾ ನುಗಡೋಣಿ ಅವರ ವಚನ ಗಾಯನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಬಾಬುಶೆಟ್ಟಿ ನಾರಾವಿಯವರು ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಅವರು ಸ್ವಾಗತಿಸಿ, ಯಶೋಧ್ ಪಿ.ಕರ್ಕೇರಾರವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News