×
Ad

ಮದ್ರಸಾ ತಪಾಸಣಾ ಅಧಿಕಾರಿಗೆ ಅವಮಾನ ಜಿಲ್ಲಾ ಅಝ್ಹರೀಸ್ ಖಂಡನೆ

Update: 2017-03-30 15:18 IST

ಮಂಗಳೂರು, ಮಾ.29: ಕೇವಲ ಮೂರು ರೂಪಾಯಿ  ಚಿಲ್ಲರೆ ವಿಷಯಕ್ಕಾಗಿ ದಿನ ನಿತ್ಯ ಸಾರಿಗೆ ಬಸ್ಸಿನಲ್ಲಿ ಸಂಚರಿಸುವ ಕಕ್ಕಿಂಜೆ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರನ್ನು ಚಾರ್ಮಾಡಿ ಘಾಟ್ ಮಧ್ಯೆ ನಿರ್ಜನ ಪ್ರದೇಶದಲ್ಲಿ ಬಸ್ಸಿನ ನಿರ್ವಾಹಕ ಕೆಳಗಿಳಿಸಿದ ಅಮಾನವೀಯ ಕೃತ್ಯವನ್ನು ಮಿತ್ತಬೈಲಿನಲ್ಲಿ ನಡೆದ ದ.ಕ ಜಿಲ್ಲಾ ಅಝ್ಹರೀಸ್ ಸಭೆಯು ಖಂಡಿಸಿತು.

ತಪ್ಪಿತಸ್ತರ ವಿರುದ್ದ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿತು.ಇತ್ತೀಚಿನ ದಿನಗಳಲ್ಲಿ  ಹೆಚ್ಚುತ್ತಿರುವ ಅಲ್ಪಸಂಖ್ಯಾತರ ವಿರುದ್ದ ಹಲ್ಲೆ ಕೊಲೆ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಮಾಜದಲ್ಲಿ ಶಾಂತಿ ನೆಮ್ಮದಿ ಬೇಕಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿತು. ಸಭೆಯಲ್ಲಿ ಕೊಲೆಯಾದ ರಿಯಾಝ್ ಮುಸ್ಲಿಯಾರ್ ಅವರಿಗೆ ದುವಾ ಮಾಡಲಾಯಿತು. ಅನಸ್ ತಂಙಳ್ ಗಂಡಿಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ನಝೀರ್ ಅಝ್ಹರಿ ಉದ್ಘಾಟಿಸಿದರು. ಮುಸ್ತಫ ಅಝ್ಹರಿ ಸ್ವಾಗತಿಸಿ ರಝಾಕ್ ಅಝ್ಹರಿ ವಂದಿಸಿದರು.

ಅಶ್ರಫ್ ಅಝ್ಹರಿ ವರದಿ ವಾಚಿಸಿದರು.ಬಶೀರ್ ಅಝ್ಹರಿ,ಮುನೀರ್ ಅಝ್ಹರಿ, ಶರೀಫ್ ಅಝ್ಹರಿ ,ಸಿರಾಜ್ ಅಝ್ಹರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News