×
Ad

ಉಜಿರೆ: ಗುಂಪುಗಳ ಮಧ್ಯೆ ಘರ್ಷಣೆ; ಹಲವರಿಗೆ ಗಾಯ

Update: 2017-03-30 16:02 IST

ಉಜಿರೆ, ಮಾ.29: ಎರಡು ಗುಂಪುಗಳ ಮಧ್ಯೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಉಜಿರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮಹೇಶ ಶೆಟ್ಟಿ ತಿಮರೋಡಿಯೊಂದಿಗೆ ಗುರುತಿಸಿಕೊಂಡಿದ್ದ ಯುವಕರ ಗುಂಪೊಂದು ಇದೀಗ ಕೆಲ ದಿನಗಳಿಂದ ಎರಡು ತಂಡಗಳಾಗಿದ್ದು ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊಡೆದಾಟದಲ್ಲಿ ಪ್ರೀತಂ, ಸಂದೇಶ, ಧೀರಜ್, ದಿನೇಶ್, ಅಜಿತ್ ಹಾಗೂ ನಿತೇಶ್ ಎಂಬವರಿಗೆ ಗಾಯಗಳಾಗಿದ್ದು,  ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನೊಂದು ತಂಡದ ಮನೋಜ್, ಪ್ರಮೋದ್, ಪ್ರಜ್ವಲ್, ಜಗದೀಶ್, ನಿತಿನ್, ಗಣೇಶ ಎಂಬವರು ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News