×
Ad

ಮನಪಾ: ಕುಡಿಯುವ ನೀರಿನ ಪೂರೈಕೆ - ಮಳೆ ಬರುವವರೆಗೆ ಪ್ರಸಕ್ತ ರೇಶನಿಂಗ್ ವ್ಯವಸ್ಥೆ ಮುಂದುವರಿಕೆ

Update: 2017-03-30 16:42 IST

ಮಂಗಳೂರು, ಮಾ. 30: ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ತೊಂದರೆ ಆಗದಿರುವ ಹಿನ್ನೆಲೆಯಲ್ಲಿ ಈಗಾಗಲೇ ನೀರಿನ ಪೂರೈಕೆಯಲ್ಲಿ ಆರಂಭಿಸಲಾಗಿರುವ ರೇಶನಿಂಗ್ ವ್ಯವಸ್ಥೆ ಸದ್ಯದ ಸ್ಥಿತಿಯಲ್ಲೇ ಮುಂದುವರಿಯಲಿದೆ. ಮಳೆ ಉತ್ತಮವಾಗಿ ಆದಲ್ಲಿ ರೇಶನಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಉಪ ಮೇಯರ್, ವಿಪಕ್ಷದ ಸದಸ್ಯರ ಜತೆ ಆಡಳಿತ ಪಕ್ಷದ ಸದಸ್ಯರ ಸಭಾತ್ಯಾಗದ ಹೊರತಾಗಿಯೂ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಮೇಯರ್ ಕುಡಿಯುವ ನೀರಿಗೆ ಸಂಬಂಧಿಸಿ ಈ ಪ್ರತಿಕ್ರಿಯೆ ನೀಡಿದರು.

ಸದಸ್ಯ ಪುರುಷೋತ್ತಮ ಚಿತ್ರಾಪುರ ಅವರು ವಿಷಯ ಪ್ರಸ್ತಾಪಿಸುತ್ತಾ, ತುಂಬೆ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹ ಹಾಗೂ ನೀರಿನ ಬೇಡಿಕೆ ಕುರಿತಂತೆ ಮಾಹಿತಿ ಒದಗಿಸಬೇಕೆಂದು ಆಗ್ರಹಿಸಿದರು.

ಮೇಯರ್ ಕವಿತಾ ಸನಿಲ್ ಮಾತನಾಡಿ, ಇಂದು ತುಂಬೆ ಅಣೆಕಟ್ಟಿನಲ್ಲಿ 4.72 ಮೀಟರ್ ನೀರು ಸಂಗ್ರಹವಿದೆ. ಶಂಭೂರಿನ ಎಎಂಆರ್ ಅಣೆಕಟ್ಟಿನಲ್ಲಿ ಸಮುದ್ರ ಮಟ್ಟದಿಂದ 18 ಮೀಟರ್‌ರವರೆಗೆ ನೀರಿದೆ. ಕಳೆದ ಸೋಮವಾರದಿಂದ ಮೂರು ದಿನ ನೀರು ಪೂರೈಕೆ ಹಾಗೂ ಎರಡು ದಿನ ಕಡಿತ ವ್ಯವಸ್ಥೆಯಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಜಿಲ್ಲಾಕಾರಿಯವರಿಗೆ ಮನವಿ ಸಲ್ಲಿಸಿ ಈಗಾಗಲೇ ದಿಶಾ ಡ್ಯಾಂನಿಂದಲೂ ತುಂಬೆ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಎಎಂಆರ್ ಅಣೆಕಟ್ಟಿನಿಂದ ಎಂಆರ್‌ಪಿಎಲ್ ಹಾಗೂ ಎಂಎಸ್‌ಇಝೆಡ್‌ನವರು ನೀರು ತೆಗೆಯುತ್ತಿದ್ದರೂ, ಡ್ಯಾಂನಲ್ಲಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಇದೇ ವೇಳೆ ಶಾಸಕರು, ಮೇಯರ್ ಸಮಕ್ಷಮದಲ್ಲಿ ಸಭೆ ನಡೆಸಿ, ನಗರದಲ್ಲಿ ಲಭ್ಯವಿರುವ ಕೊಳವೆ ಬಾವಿ, ತೆರೆದ ಬಾವಿಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ. ತೆರೆದ ಬಾವಿಗಳನ್ನು ಆಳ ಮಾಡುವುದು, ಪಂಪ್ ಅಳವಡಿಕೆ ಸಂಬಂಯೂ ಮನವಿ ಬಂದಲ್ಲಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿ ಪಾಲಿಕೆಯಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News